ಧಾರವಾಡ: ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಗೆ ಅಪರೂಪದ ಅತಿಥಿಯೊಂದರ ಆಗಮನವಾಗಿತ್ತು. ಇದನ್ನು ನೋಡಿದ ಜನ ಒಂದು ಕ್ಷಣ ಹೌಹಾರಿದರು. ಅಷ್ಟಕ್ಕೂ ಜನರಲ್ಲಿ ಕುತೂಹಲ ಮೂಡಿಸಿದ ಆ ಅತಿಥಿ ಯಾರು ಅಂದ್ರೆ ಅದು ಪುನುಗು ಬೆಕ್ಕು.
ಸರ್ಕಾರಿ ಕಚೇರಿಗೆ ಪುನುಗು ಬೆಕ್ಕು... ಅಪರೂಪದ ಅತಿಥಿ ನೋಡಿ ಅಚ್ಚರಿಗೊಂಡ ಜನ - ಪುನುಗು ಬೆಕ್ಕು, ಸರ್ಕಾರಿ ಕಚೇರಿ, ಉಪ ವಿಭಾಗಧಿಕಾರಿ ಕಚೇರಿ, ಧಾರವಾಡ,
ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷಗೊಂಡ ಪುನುಗು ಬೆಕ್ಕು, ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಆವರಣದಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಕಚೇರಿಗೆ ಆಗಮಿಸಿದ ಜನರು ಈ ಅಪರೂಪದ ಅತಿಥಿ ನೋಡಿ ಕಣ್ತುಂಬಿಕೊಂಡರು
ಸರ್ಕಾರಿ ಕಚೇರಿಗೆ ಆಗಮಿಸಿದ ಪುನುಗು ಬೆಕ್ಕು
ಇಂದು ಬೆಳ್ಳಂ ಬೆಳಗ್ಗೆ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷಗೊಂಡ ಪುನುಗು ಬೆಕ್ಕು, ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕಚೇರಿ ಆವರಣದಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಕಚೇರಿಗೆ ಆಗಮಿಸಿದ ಜನರು ಈ ಅಪರೂಪದ ಅತಿಥಿಯನ್ನು ನೋಡಿ ಕಣ್ತುಂಬಿಕೊಂಡರು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಯಲ್ಲಪ್ಪ ಪುನುಗು ಬೆಕ್ಕನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.