ಹುಬ್ಬಳ್ಳಿ:ನಟ, ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿಯ ಅಪ್ಪುವಿನ ಅಭಿಮಾನಿಗಳು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಪೂಜೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಅಪ್ಪುವಿಗೆ ಪ್ರೀತಿಯ ಊಟವನ್ನು ಅರ್ಪಿಸಿ ಭಾವುಕಾರಾದ ಹುಬ್ಬಳ್ಳಿಯ ಅಭಿಮಾನಿ.. - ಹುಬ್ಬಳ್ಳಿಯಲ್ಲಿ ಅಪ್ಪುವಿಗೆ ಅಭಿಮಾನಿಗಳಿಂದ ನಮನ
ಇಂದು ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳು ಅಪ್ಪುವಿನ ಭಾವಚಿತ್ರದ ಮುಂದೆ ಅವರಿಷ್ಟದ ಊಟವನ್ನು ಇಟ್ಟು ಗೌರವ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಪುನೀತ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕರಾಳ ದಿನ ಎಂದು ಆಚರಿಸಿದ ಅಭಿಮಾನಿ ರಘು ವದ್ದಿ ಹಾಗೂ ಗೆಳೆಯರು, ಕಪ್ಪು ಶರ್ಟ್ ಹಾಕಿ ಬ್ಲ್ಯಾಕ್ ಡೇ ಎಂದು ಬರೆದು ಅಪ್ಪುವಿಗೆ ಗೌರವ ನಮನ ಸಲ್ಲಿಸಿದರು. ಅಪ್ಪು ಭಾವಚಿತ್ರದ ಮುಂದೆ ಅವರಿಷ್ಟದ ಸಾವಜಿ ಊಟ ಚಿಕನ್, ಚಿಕನ್ ಕಬಾಬ್, ಮಟನ್ ಕೈಮಾ, ಖಡಕ್ ರೊಟ್ಟಿ, ಸ್ವೀಟ್ ಸೇರಿದಂತೆ ಇತರೆ ಖಾದ್ಯಗಳನ್ನು ಬಡಸಿ ಪುಣ್ಯಸ್ಮರಣೆ ಮಾಡಿದರು. ಬಳಿಕ ಅಪ್ಪುವಿನ ಅಭಿಮಾನಿಯಾದಂತಹ ರಘು ವದ್ದಿ ಅವರು ಪುನೀತ್ ಅವರನ್ನು ನೆನೆದು ಭಾವುಕರಾದರು.
ಇದನ್ನೂ ಓದಿ:ನಟನೆಗೂ ಸೈ ಗಾಯನಕ್ಕೂ ಜೈ ಅಂದಿದ್ದ ಪುನೀತ್: 'ಬಾನ ದಾರಿಯಲ್ಲಿ ಜಾರಿ ಹೋದ' ಅಪ್ಪು ಹಾಡಿದ ಬೆಸ್ಟ್ ಹಾಡುಗಳಿವು