ಹುಬ್ಬಳ್ಳಿ :ನಟ ಪುನೀತ್ ರಾಜ್‍ಕುಮಾರ್ ಅಗಲಿ ಒಂದು ತಿಂಗಳು ಕಳೆದಿದೆ. ಆದರೆ, ಅವರ ಅಗಲಿಕೆಯ ನೋವು ಅಭಿಮಾನಿಗಳಲ್ಲಿ ಇಂದಿಗೂ ಹಸಿಯಾಗಿದೆ. ಇದೀಗ ಅವರ ಮಹಿಳಾ ಅಭಿಮಾನಿಯೊಬ್ಬರು ಮ್ಯಾರಥಾನ್ ಓಟದ ಮೂಲಕ ಬೆಂಗಳೂರು ತಲುಪಿ ಅವರ ಸಮಾಧಿ ದರ್ಶನ ಪಡೆಯಲು ಮುಂದಾಗಿದ್ದಾರೆ.
ಧಾರವಾಡ ಜಿಲ್ಲೆಯ ಮನಗುಂಡಿಯ ದಾಕ್ಷಾಯಿಣಿ ಪಾಟೀಲ್ ಎಂಬ ಮಹಿಳೆ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ದರ್ಶನಕ್ಕೆ ಹೊರಟಿದ್ದಾರೆ. 30 ವರ್ಷದ ದ್ರಾಕ್ಷಾಯಿಣಿ ಬಾಲ್ಯದಿಂದಲೇ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಂತೆ.
ಅಪ್ಪು ಸಿನಿಮಾ ಅಂದರೇ ಅಚ್ಚುಮೆಚ್ಚು. ಹೀಗಾಗಿ, ಪುನೀತ್ ಅಗಲಿಕೆಯ ಬಳಿಕ ಅವರ ಸಮಾಧಿಯ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಮ್ಯಾರಥಾನ್ ಆರಂಭಿಸಿದ್ದಾರೆ.