ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ - ಧಾರವಾಡದಲ್ಲೂ ಅಬ್ಬರಿಸಿದ ಜೇಮ್ಸ್​: ಪಟಾಕಿ ಸಿಡಿಸಿ ಅಭಿಮಾನಿಗಳಿಂದ ಸಂಭ್ರಮ - ಹುಬ್ಬಳ್ಳಿ-ಧಾರವಾಡದಲ್ಲೂ ಜೇಮ್ಸ್​ ಸಿನಿಮಾ ಬಿಡುಗಡೆ

ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​ ಸಿನಿಮಾ ಹುಬ್ಬಳ್ಳಿ - ಧಾರವಾಡದಲ್ಲೂ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್​​ಗಳಿಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Puneeth James movie release in Hubli -Dharwad
ಹುಬ್ಬಳ್ಳಿ-ಧಾರವಾಡದಲ್ಲೂ ಜೇಮ್ಸ್​ ಸಿನಿಮಾ ಬಿಡುಗಡೆ

By

Published : Mar 17, 2022, 2:30 PM IST

ಧಾರವಾಡ: ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​ ಸಿನಿಮಾ ಇಂದು ತೆರೆಗೆ ಅಪ್ಪಳಿಸಿದೆ. ನಗರದ ಚಿತ್ರಮಂದಿರಗಳಲ್ಲಿ ಚಿತ್ರದ ಮೊದಲ ಶೋ ಭರ್ಜರಿ ಓಪನಿಂಗ್ ಪಡೆದಿದೆ.

ಧಾರವಾಡಲ್ಲಿ ಜೇಮ್ಸ್​ ಜಾತ್ರೆ

ನಗರದ ಪದ್ಮಾ ಚಿತ್ರಮಂದಿರದಲ್ಲಿ ಜೇಮ್ಸ್ ಬಿಡುಗಡೆಯಾಗಿದ್ದು, ಥಿಯೇಟರ್​​​ ಆವರಣದಲ್ಲಿ ಹಾಕಲಾಗಿರುವ ಅಪ್ಪು ಕಟೌಟ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಪ್ಪು ಕೊನೆಯ ಚಿತ್ರ ಜೇಮ್ಸ್​ ವೀಕ್ಷಣೆಗೆ ಅಭಿಮಾನಿಗಳು ಮುಗಿಬಿದ್ದಿದ್ದು, ಟಿಕೆಟ್‌ ಕೂಡ ಸೋಲ್ಡ್ ಔಟ್ ಆಗಿವೆ.

ಹುಬ್ಬಳ್ಳಿಯಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಗೌರವ ಸಲ್ಲಿಸಿದ ಫ್ಯಾನ್ಸ್​:ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಅಪ್ಪು ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಚಿತ್ರಮಂದಿರ ಬಳಿ ಆಗಮಿಸಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಚಿತ್ರವನ್ನು ವಿಜೃಂಭಣೆಯಿಂದ ಸ್ವಾಗತಿಸಿದರು. ಅಪ್ಪು ಫ್ಲೆಕ್ಸ್, ಬ್ಯಾನರ್​ಗಳು ಚಿತ್ರಮಂದಿರಗಳ ಆವರಣದಲ್ಲಿ ರಾರಾಜಿಸುತ್ತಿದ್ದವು.

ರಾತ್ರಿಯೇ ಕೇಕ್​ ಕತ್ತರಿಸಿ ಸಂಭ್ರಮಾಚರಣೆ

ರಾತ್ರಿಯೇ ಸಂಭ್ರಮ:

ಹುಬ್ಬಳ್ಳಿ ಚಿತ್ರಮಂದಿರಗಳಲ್ಲಿ ಸಂಭ್ರಮ

ಇನ್ನು ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾತ್ರಿಯೇ ಕೇಕ್​ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಇಂದು ಜೇಮ್ಸ್​ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ಬೆಳಗಾವಿ: ಪ್ರೀತಿಯ ಅಪ್ಪುಗಾಗಿ 17ನೇ ಸೀಟ್​ ಬುಕ್ ಮಾಡಿದ ಅಭಿಮಾನಿ

For All Latest Updates

ABOUT THE AUTHOR

...view details