ಹುಬ್ಬಳ್ಳಿ:ಇಲ್ಲಿನ ವಿದ್ಯಾನಗರದ ಪ್ರತಿಷ್ಠಿತ ಟೆಂಡರ್ ಶ್ಯೂರ್ ರಸ್ತೆ ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಹುಬ್ಬಳ್ಳಿ: ಪ್ರತಿಷ್ಠಿತ ಟೆಂಡರ್ ಶ್ಯೂರ್ ರಸ್ತೆ ಅತಿಕ್ರಮಣ ಆರೋಪ - Hubli latest news
ಹುಬ್ಬಳ್ಳಿಯಲ್ಲಿ ಪಿ.ಸಿ ಜಾಬೀನ ಕಾಲೇಜಿನಿಂದ ತೋಳನಕೆರೆವರೆಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಕಾಮಗಾರಿ ಮಾಡುವ ಸಾಮಾಗ್ರಿಗಳನ್ನು ಇಟ್ಟಿದ್ದು, ಸಾರ್ವಜನಿಕರಿಗೆ ಓಡಾಡಲಿಕ್ಕೆ ತೊಂದರೆಯಾಗುತ್ತಿದೆ. ಇದರಿಂದ ರಸ್ತೆಯೂ ಹಾಳಾಗುತ್ತಿದೆ.
![ಹುಬ್ಬಳ್ಳಿ: ಪ್ರತಿಷ್ಠಿತ ಟೆಂಡರ್ ಶ್ಯೂರ್ ರಸ್ತೆ ಅತಿಕ್ರಮಣ ಆರೋಪ ಹುಬ್ಬಳ್ಳಿ](https://etvbharatimages.akamaized.net/etvbharat/prod-images/768-512-12:56:21:1596007581-kn-hbl-02-raste-atikraman-av-7208089-29072020121810-2907f-1596005290-799.jpg)
ಪಿ.ಸಿ ಜಾಬೀನ ಕಾಲೇಜಿನಿಂದ ತೋಳನಕೆರೆವರೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಟೆಂಡರ್ ಶ್ಯೂರ್ ರಸ್ತೆಯ ಫುಟ್ಪಾತ್, ಸೈಕಲ್ ಪಾತ್ ಹಾಗೂ ವಾಕಿಂಗ್ ಪಾತ್ಗಳು ಅತಿಕ್ರಮಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ರಸ್ತೆ ಪಕ್ಕದ ಅಂಗಡಿ, ಮನೆ, ಬಿಲ್ಡಿಂಗ್ ಮಾಲೀಕರು ರಸ್ತೆಯ ಮೇಲೆ ಅಂಗಡಿ ಸಾಮಾನುಗಳನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಮನೆ ಹಾಗೂ ಬಿಲ್ಡಿಂಗ್ ಕಾಮಗಾರಿಯ ಮರಳನ್ನೆಲ್ಲ ತಂದು ಸುರಿದಿದ್ದಾರೆ. ಹೀಗಾಗಿ ವಾಕಿಂಗ್ ಪಾತ್ ಮೇಲೆ ಜನರು ಓಡಾಡಲು ಸ್ಥಳ ಇಲ್ಲದಂತಾಗಿದೆ.
ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲವಾದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ ರಸ್ತೆ ಎಲ್ಲಾ ರಸ್ತೆಗಳಂತೆ ಅತಿಕ್ರಮಣವಾಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.