ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಸಾರ್ವಜನಿಕ ಸಹಭಾಗಿತ್ವ ಅವಶ್ಯಕ: ಶೆಟ್ಟರ್

ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ.

ಜಗದೀಶ ಶೆಟ್ಟರ್ ಮಾತನಾಡಿದ್ದಾರೆ

By

Published : Sep 29, 2019, 6:36 PM IST

ಹುಬ್ಬಳ್ಳಿ: ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಸಾರ್ವಜನಿಕ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಹು-ಧಾ ಮಹಾನಗರ ಪಾಲಿಕೆಯ ವತಿಯಿಂದ ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಹೀ ಸೇವಾ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು, ಜಾಗೃತಿ ಮೂಡಿಸುವ ವಾಕಥಾನ್ ಮತ್ತು ಸೈಕ್ಲೊಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಚಿವ ಜಗದೀಶ್ ಶೆಟ್ಟರ್

ನಂತರ ಮಾತನಾಡಿದ ಅವರು, ದೇಶದ ಸ್ವಚ್ಚತಾ ಹಿತದೃಷ್ಟಿಯಿಂದ ಆಯೋಜಿಸಲಾಗಿರುವ ಅಭಿಯಾನ ಶ್ಲಾಘನೀಯವಾಗಿದೆ ಎಂದರು.ಪ್ಲಾಸ್ಟಿಕ್ ಉತ್ಪನ್ನಗಳಿಂದ ಪರಿಸರಕ್ಕೆ ದೊಡ್ಡ ಪ್ರಮಾಣದ ಹಾನಿಯಾಗುತ್ತಿದೆ. ಆದ್ದರಿಂದ ಎಸ್.ಯು‌.ಪಿ.(ಸಿಂಗಲ್ ಯೂಸ್ ಪ್ಲಾಸ್ಟಿಕ್)ಗಳನ್ನು ರದ್ದುಗೊಳಿಸುವಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗೆ ಸಾರ್ವಜನಿಕರು ಬದ್ದರಾಗಿ ಕೈ ಜೋಡಿಸಬೇಕು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರದ ಕನಸನ್ನು ನನಸು ಮಾಡಬೇಕು ಎಂದು ಹೇಳಿದ್ರು.

'ನಮ್ಮ ಪರಿಸರ ನಮ್ಮ ಆಸ್ತಿ', ಆದ್ದರಿಂದ ನಾವೆಲ್ಲ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಶ್ರಮಿಸೋಣ .ಈ ಸೈಕ್ಲೊಥಾನ್ ಅಭಿಯಾನ ಉತ್ತಮ ರೀತಿಯಲ್ಲಿ ಮುನ್ನಡೆಯಲಿ. ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಪ್ರೇರಣೆಯಾಗಲಿ ಎಂದು ಅವರು ಆಶಿಸಿದರು.

ABOUT THE AUTHOR

...view details