ಕರ್ನಾಟಕ

karnataka

ETV Bharat / state

ವಿದ್ಯತ್​ ದರ ಏರಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಸರ್ಕಾರ ವಿದ್ಯುತ್ ದರವನ್ನು ಒಂದು ಯುನಿಟ್​ಗೆ 30 ಪೈಸೆ ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಜನರಿಗೆ ಲಾಕ್​​ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಬೆಲೆ ಏರಿಕೆ ಬಿಸಿ ಜೀವನವನ್ನು ಮತ್ತಷ್ಟು ಸಮಸ್ಯೆಯತ್ತ ದೂಡಿದೆ.

Public outrage against ತhe rise in electricity rates
ವಿದ್ಯತ್​ ದರ ಏರಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

By

Published : Jun 11, 2021, 4:56 PM IST

ಹುಬ್ಬಳ್ಳಿ: ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರ ಬದುಕಿನಲ್ಲಿ ಆಟ ಆಡುತ್ತಲೇ ಇದೆ. ದಿನನಿತ್ಯ ಇಂಧನ ಬೆಲೆ ಏರಿಕೆಯ ಜೊತೆಗೆ ಈಗ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರು ಇದೀಗ ಮತ್ತೊಂದು ಸಮಸ್ಯೆ ಎದುರಿಸಬೇಕಾಗಿದೆ.

ವಿದ್ಯತ್​ ದರ ಏರಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಇಷ್ಟು ದಿನ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಆಯ್ತು. ಈಗ ಸರ್ಕಾರ ವಿದ್ಯುತ್ ದರವನ್ನು ಒಂದು ಯುನಿಟ್​ಗೆ 30 ಪೈಸೆ ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಏಪ್ರಿಲ್ 1ರಿಂದಲೇ ಅನ್ವಯ ಆಗುವಂತೆ ವಿದ್ಯುತ್ ದರವನ್ನು ಯುನಿಟ್​ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ.

ಇದರಿಂದ ಸಾರ್ವಜನಿಕರ ಬದುಕಿನಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಜನರಿಗೆ ಲಾಕ್​ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಬೆಲೆ ಏರಿಕೆ ಬಿಸಿ ಜೀವನವನ್ನು ಮತ್ತಷ್ಟು ಸಮಸ್ಯೆಯತ್ತ ದೂಡಿದೆ. ಏಪ್ರಿಲ್​ನಲ್ಲಿಯೇ ಪ್ರಕಟವಾಗಬೇಕಿದ್ದ ಆದೇಶವನ್ನು ಜೂನ್​ನಲ್ಲಿ ಆದೇಶ ಹೊರಡಿಸಿ ಏಪ್ರಿಲ್​ನಿಂದಲೇ ಅನ್ವಯ ಆಗುವಂತೆ ಆದೇಶಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಾಕ್​ಡೌನ್​ನಿಂದ ಮೊದಲೇ ಕೆಲಸವಿಲ್ಲದೆ ಬರಿಗೈಯಲ್ಲಿರುವ ಜನರಿಗೆ ವಿದ್ಯುತ್ ದರ ಏರಿಕೆ ನುಂಗಲಾರದ ತುತ್ತಾಗಿದೆ. ಕೂಡಲೇ ಸರ್ಕಾರ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

For All Latest Updates

ABOUT THE AUTHOR

...view details