ಹುಬ್ಬಳ್ಳಿ:ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿದ್ದ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಮಾಡಿದೆ. ಆದರೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಜನರು ಮಾತ್ರ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದಾರೆ.
ಹುಬ್ಬಳ್ಳಿ: ಭಿಕ್ಷುಕರಿಗೆ ಊಟ, ವಸತಿ ವ್ಯವಸ್ಥೆ ಮಾಡಿಕೊಡುವಂತೆ ಸಾರ್ವಜನಿಕರಿಂದ ಆಗ್ರಹ - ಭಿಕ್ಷುಕರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಸಾರ್ವಜನಿಕರಿಂದ ಆಗ್ರಹ
ಲಾಕ್ಡೌನ್ನಿಂದಾಗಿ ಹುಬ್ಬಳ್ಳಿ ನಗರದಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಭಿಕ್ಷುಕರಿಗೆ ಜಿಲ್ಲಾಡಳಿತ ಊಟ, ವಸತಿಯ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದಲ್ಲಿ ಸಾವಿರಕ್ಕೂ ಹೆಚ್ಚು ಭಿಕ್ಷುಕರಿದ್ದು, ಲಾಕ್ಡೌನ್ಗಿಂತ ಮೊದಲು ಇವರೆಲ್ಲ ಭಿಕ್ಷೆ ಬೇಡಿ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ಡೌನ್ ಶುರುವಾದ ಮೇಲೆ ನಗರದಲ್ಲಿ ಜನರ ಓಡಾಟವಿಲ್ಲದೆ ಇವರಿಗೆ ಏನೂ ಸಿಗುತ್ತಿಲ್ಲ. ಹೊಟೇಲ್ಗಳು ಬಂದ್ ಆಗಿರುವುದರಿಂದ ಒಪ್ಪೊತ್ತಿನ ಊಟವೂ ಸಿಗುತ್ತಿಲ್ಲ. ಹೀಗಾಗಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಜನರು ಈಗ ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಮುಂದೆ ಕಾಲ ಕಳೆಯುತ್ತಿದ್ದಾರೆ.
ಸರಿಯಾಗಿ ಕುಡಿಯಲು ನೀರು ಕೂಡ ಸಿಗದೆ ಪರದಾಡುತ್ತಿರುವ ಭಿಕ್ಷುಕರಿಗೂ ಜಿಲ್ಲಾಡಳಿತ ಮಾನವೀಯತೆಯ ದೃಷ್ಟಿಯಿಂದ ಊಟ, ವಸತಿಯ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.