ಹುಬ್ಬಳ್ಳಿ:ಕರ್ತವ್ಯ ನಿರತ ಪಾಲಿಕೆಯ ಕಂದಾಯ ಅಧಿಕಾರಿಯನ್ನು ಪೊಲೀಸರು ಥಳಿಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹು-ಧಾ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಎನ್.ಕೆ. ಅಂಗಡಿ ಅವರ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ.
ಏಪ್ರಿಲ್ 22ರಂದು ಹಳೇ ಹುಬ್ಬಳ್ಳಿ ಇಂಡಿ ಪಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೇರಿ ಕ್ರಾಸ್ ಬಳಿ, ಹಾಲು ವಿತರಣೆ ಕಾರ್ಯದ ಮೇಲೆ ತೆರಳುತ್ತಿದ್ದ ಪಾಲಿಕೆ ಅಧಿಕಾರಿಯನ್ನು ತಡೆದು ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಈ ಕುರಿತು ಹಲ್ಲೆ ನಡೆಸಿದ ಪಿಎಸ್ಐ ಸುಖಾನಂದ ಬಿ.ಎಸ್. ಮೇಲೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸಿಬ್ಬಂದಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.