ಕರ್ನಾಟಕ

karnataka

ETV Bharat / state

ನೈರುತ್ಯ ರೈಲ್ವೆಯಲ್ಲಿ ಕಾಯ್ದಿರಿಸಿದ ಟಿಕೆಟ್‌ಗಾಗಿ ಪಿಆರ್‌ಎಸ್ ಕೌಂಟರ್‌ ಆರಂಭ..! - ಪಿಆರ್‌ಎಸ್ ಕೌಂಟರ್‌

ನೈರುತ್ಯ ರೈಲ್ವೆಯಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪಿಆರ್‌ಎಸ್ ಕೌಂಟರ್‌ಗಳು ಇಂದಿನಿಂದ ತೆರೆಯಲಾಗಿದೆ. ಬುಕಿಂಗ್ ಕಚೇರಿಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PRS Counter Open for Reserved Tickets at Southwest Railway
ನೈರುತ್ಯ ರೈಲ್ವೆಯಲ್ಲಿ ಕಾಯ್ದಿರಿಸಿದ ಟಿಕೆಟ್‌ಗಾಗಿ ಪಿಆರ್‌ಎಸ್ ಕೌಂಟರ್‌ ಓಪನ್

By

Published : May 22, 2020, 9:40 AM IST

ಹುಬ್ಬಳ್ಳಿ:ಕಾಯ್ದಿರಿಸಿದ ಟಿಕೆಟ್‌ಗಳನ್ನು ಹಂತಹಂತವಾಗಿ ಕಾಯ್ದಿರಿಸಲು ಕೌಂಟರ್‌ಗಳನ್ನು ತೆರೆಯಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾರಂಭಿಕವಾಗಿ ನೈರುತ್ಯ ರೈಲ್ವೆ ಯಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪಿಆರ್‌ಎಸ್ ಕೌಂಟರ್‌ಗಳು ಇಂದಿನಿಂದ ತೆರೆಯಲಾಗಿದೆ.

ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ವಿಜಯಪುರ, ಧಾರವಾಡ, ಹೊಸಪೇಟೆ, ವಾಸ್ಕೋ-ಡಿ-ಗಾಮಾ, ಬೆಂಗಳೂರು ವಿಭಾಗದ ಕೆ.ಎಸ್.ಆರ್ ಬೆಂಗಳೂರು,ಯಶವಂತಪುರ, ಬೆಂಗಳೂರು ಕ್ಯಾಂಟ್, ಬಂಗಾರ್‌ಪೇಟೆ, ಕೆಂಗೇರಿ, ಕೃಷ್ಣರಾಜಪುರಂ, ಸತ್ಯ ಶಾಂತಿಪ್ರಶಾಂತಿ ನಿಲಯಂ ಹಾಗೂ ಮೈಸೂರು ವಿಭಾಗದ ಮೈಸೂರು, ದಾವಣಗೆರೆ ಮತ್ತು ಶಿವಮೊಗ್ಗದ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ತೆರೆಯಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಜಾರಿಗೆ ತರಲಾಗುವುದು ಹಾಗೂ ಬುಕಿಂಗ್ ಕಚೇರಿಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details