ಕರ್ನಾಟಕ

karnataka

ETV Bharat / state

ಧಾರವಾಡ ಪ್ರತ್ಯೇಕ ಪಾಲಿಕೆಗೆ ಪ್ರತಿಭಟನೆ: ವರದಿ ನೀಡುವ ಭರವಸೆ ನೀಡಿದ ಮೇಯರ್

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಒತ್ತಾಯಿಸಿ ಹಿರಿಯ ನಾಗರೀಕರು ಮತ್ತು ಸಾಮಾಜಿಕ ಹೋರಾಟಗಾರರು ಇಂದು ಪ್ರತಿಭಟನೆ ನಡೆಸಿದರು.

protestors-urges-to-separate-municiplity-for-dharwad
ಧಾರವಾಡ ಪ್ರತ್ಯೇಕ ಪಾಲಿಕೆಗೆ ಹೋರಾಟ: ವರದಿ ಸಲ್ಲಿಸುವ ಬಗ್ಗೆ ಭರವಸೆ ನೀಡಿದ ಮೇಯರ್

By

Published : Jun 30, 2022, 4:34 PM IST

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒಂದೇ ಆಗಿದ್ದು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಹಿರಿಯ ನಾಗರೀಕರು ಮತ್ತು ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಾಲಿಕೆ ಮೇಯರ್, ಮನವಿ ಸ್ವೀಕರಿಸಿದರು.


ಪಾಲಿಕೆ ಸಭೆ ಆರಂಭಕ್ಕೂ ಮುನ್ನ ಪ್ರತಿಭಟನಾಕಾರರು ಎಚ್.ಡಿ.ಎಂ.ಸಿ ಬೇಡ, ಡಿ.ಎಂ.ಸಿ ಬೇಕು ಎಂಬ ಘೋಷಣೆ ಮೊಳಗಿಸಿದರು. ಬಳಿಕ ಮಾತನಾಡಿದ ಮೇಯರ್, "ಈ ಕುರಿತು ಸೂಕ್ತ ಚರ್ಚೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ" ಎಂದು ಭರವಸೆ ನೀಡಿದರು.

ಕ್ರಿಕೆಟ್ ಆಡಿ ವಿನೂತನ ಪ್ರತಿಭಟನೆ: ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಬೇಕಿದ್ದ ನೆಹರೂ ಮೈದಾನ ಈವರೆಗೆ ಅಭಿವೃದ್ಧಿ ಕಾಣದೆ ಯುವಕರು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಮೈದಾನದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ಯುವಕರು ಪಾಲಿಕೆ ಆವರಣದಲ್ಲಿ ಕ್ರಿಕೆಟ್ ಬ್ಯಾಟ್, ಬಾಲ್ ಹಿಡಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್

ABOUT THE AUTHOR

...view details