ಕರ್ನಾಟಕ

karnataka

ETV Bharat / state

ಬಾರ್​​ ಮುಚ್ಚುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಮುಂದುವರೆದ ಪ್ರತಿಭಟನೆ - undefined

ಸ್ಥಳೀಯರ ವಿರೋಧದಂತೆ ಬಂದ್​ ಮಾಡಿದ್ದ ಬಾರ್​ಅನ್ನು ಏಕಾಏಕಿ ಪ್ರಾರಂಭ ಮಾಡಿದ ಹಿನ್ನೆಲೆ ಹೆಬ್ಬಳ್ಳಿ‌ ಅಗಸಿ ಗ್ರಾಮಸ್ಥರು ನಿನ್ನೆ ಪ್ರತಿಭಟನೆ ನಡೆಸಿದ್ದು, ಇಂದೂ ಕೂಡ ಪ್ರತಿಭಟನೆ ಮುಂದುವರೆದಿದೆ.

ಬಾರ್​ ಬಂದ್​ ಆಗ್ರಹಿಸಿ ಪ್ರತಿಭಟನೆ: ಇಂದು ಕೂಡಾ ಮುಂದುವರಿಕೆ

By

Published : May 17, 2019, 3:34 PM IST

ಧಾರವಾಡ: ನಗರದ ಹೆಬ್ಬಳ್ಳಿ‌ ಅಗಸಿ ಸಮೀಪದ ನವಲಗುಂದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸಾರಾಯಿ ಅಂಗಡಿಯನ್ನು ಶೀಘ್ರವಾಗಿ ಬಂದ್ ಮಾಡುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಕೂಡಾ ಮುಂದುವರೆದಿದೆ.

ಇಂದೂ ಕೂಡ ಮುಂದುವರೆದ ಪ್ರತಿಭಟನೆ

ಇಂದು‌ ಟ್ರ್ಯಾಕ್ಟರ್ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ಥಳೀಯರು, ಟೈರ್​ಗೆ ಬೆಂಕಿ ಹಚ್ಚಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೇ ಬಾರ್ ಮಾಲೀಕರು ಮತ್ತು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ದಿಕ್ಕಾರ‌ ಕೂಗಿದರು.

ಸ್ಥಳೀಯರ ವಿರೋಧದಂತೆ ಬಾರ್ ಅಂಗಡಿಯನ್ನು ಬಂದ್ ಮಾಡಲಾಗಿತ್ತು. ಆದರೆ, ಏಕಾಏಕಿ ಬಾರ್ ಪ್ರಾರಂಭವಾಗಿದ್ದರ ವಿರುದ್ಧ ನಿನ್ನೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಸಾರಾಯಿ ಅಂಗಡಿ ಸಮೀಪವೇ ಎರಡು ಅಂಗನವಾಡಿ, ಶಾಲೆ ಹಾಗೂ ಎರಡು ದೇವಸ್ಥಾನಗಳಿದ್ದು, ಬಾರ್ ಬಂದ್ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಈ ಪ್ರದೇಶದಲ್ಲಿ ಯಾವುದೇ ಬಾರ್ ಇರಲಿಲ್ಲ. ಬಾರ್​ಗೆ ಅನುಮತಿ ನೀಡುವಾಗ ಸ್ಥಳೀಯರ ಸಮ್ಮತಿ ಕೇಳಿಲ್ಲ. ಇದೊಂದು ಅನಧಿಕೃತ ‌ಕಟ್ಟಡವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾರ್ವಜನಿಕರ ಸಂಪೂರ್ಣ ವಿರೋಧ ಗಮನಿಸದೇ ಅಬಕಾರಿ ಇಲಾಖೆ ಬಾರ್ ಮುಂದುವರೆಸುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಹಕ್ಕುಗಳ‌ ಆಯೋಗ ಅಧ್ಯಕ್ಷರಿಗೆ‌ ಮನವಿ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details