ಕಲಘಟಗಿ: ತಾಲೂಕಿನ ಬಿಸಿಯೂಟ ನೌಕರರು ಬಾಕಿ ವೇತನ ನೀಡುವಂತೆ ಒತ್ತಾಯಿಸಿ ತಾಲೂಕು ಪಂಚಾಯತ್ ಎದರು ನಾಲ್ಕನೇ ದಿನವೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ.
ಕಲಘಟಗಿ: ಬಾಕಿ ವೇತನಕ್ಕೆ ಮುಂದುವರೆದ ಬಿಸಿಯೂಟ ನೌಕರರ ಉಪವಾಸ ಸತ್ಯಾಗ್ರಹ - ಬಿಸಿಯೂಟ ನೌಕರರು ಬಾಕಿ ವೇತನಕ್ಕೆ ಆಗ್ರಹ
ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ನಾಲ್ಕು ತಿಂಗಳ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
Protest
ನಾಲ್ಕು ತಿಂಗಳ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವುದಾಗಿ ಬಿಸಿಯೂಟ ನೌಕರರು ತಿಳಿಸಿದರು. ಜೊತೆಗೆ ಸರ್ಕಾರ ಬಿಸಿಯೂಟ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗು ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.