ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಉಡಾನ್ ವೇಲ್ಪೇರ್ ಅಸೋಸಿಯೇಷನ್ನಿಂದ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸಿಎಎ ವಿರುದ್ಧ ಹುಬ್ಬಳ್ಳಿಯಲ್ಲಿ ಮಸ್ಲಿಂ ಮಹಿಳೆಯರಿಂದ ಪ್ರತಿಭಟನೆ, ಆಕ್ರೋಶ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹುಬ್ಬಳ್ಳಿ ನಗರದ ಉಡಾನ್ ವೇಲ್ಪೇರ್ ಅಸೋಸಿಯೇಷನ್ ವತಿಯಿಂದ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ತಹಶೀಲ್ ಕಚೇರಿ ಮುಂದೆ ಅಸೋಸಿಯೇಷನ್ ಕಾರ್ಯಕರ್ತರು ಸಿಎಎ ಮತ್ತು ಎನ್ಆರ್ ಸಿಯಿಂದ ದೇಶ ಉಳಿಸಿ ಎಂಬ ನಾಮಫಲಕಗಳನ್ನು ಹಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಮತ್ತು ರಾಜಕೀಯ ಜನಾಂಗೀಯ ತಾರತಮ್ಯದ ಕುರಿತಾದ ಭಾರತದ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ಪ್ರತಿಪಾದಿಸಲಾಗಿರುವ ಅಂಶಗಳು ಹಾಗೂ ಭಾರತದ ಸಂವಿಧಾನವನ್ನು ಸರ್ಕಾರ ಉಲ್ಲಂಘಿಸುತ್ತಿದೆ ದೂರಿದರು.
ಪೌರತ್ವ ಕಾಯ್ದೆ ಸಂವಿಧಾನದ 14, 15, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಒಬ್ಬ ವ್ಯಕ್ತಿಗೆ ಪೌರತ್ವ ಕೊಡಲು ಅಥವಾ ಕಿತ್ತುಕೊಳ್ಳಲು ಧರ್ಮ ಆಧಾರವಾಗಲು ಸಾಧ್ಯವಿಲ್ಲ. ಧಾರ್ಮಿಕ ಮತ್ತು ಪಂಥೀಯ ಮಾರ್ಗಗಳಲ್ಲಿ ರಾಷ್ಟ್ರವನ್ನು ವಿಭಜಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಪೌರತ್ವ ಕಾಯ್ದೆ ಕೇಂದ್ರ ಸರ್ಕಾರ ಅಂಗೀಕರಿಸಲ್ಪಟ್ಟು ಮತ್ತು ಅಧಿಸೂಚನೆಗೊಂಡಿದೆ. ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.