ಧಾರವಾಡ:ದೆಹಲಿಯ ತುಘಲಕಬಾದ್ ಪ್ರದೇಶದಲ್ಲಿದ್ದ ಸಮುದಾಯವೊಂದರ ಪ್ರತೀಕವಾಗಿದ್ದ ಕಟ್ಟಡ ನಾಶಗೊಳಿಸಿ ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ದಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಮುದಾಯದ ಪ್ರತೀಕ ನಾಶಗೊಳಿಸಿದವರ ಮೇಲೆ ಕ್ರಮಕ್ಕೆ ಆಗ್ರಹ - shri rohidasa temple
ತುಘಲಕಾಬಾದ್ ಪ್ರದೇಶದಲ್ಲಿ ಇದ್ದ ಸಮುದಾಯವೊಂದಕ್ಕೆ ಸೇರಿದ ಪ್ರತೀಕವೊಂದನ್ನ ವಿನಾಶಗೊಳಿಸಿ ಸಮಸ್ತ ಚಮ್ಮಾರ ಸಮುದಾಯದ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ. ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಲಾಯಿತು.

protest
ದುಷ್ಕರ್ಮಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಲಿಡ್ಕರ್ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ದೀಪಾ ಚೋಳನ ಅವರ ಮೂಲಕ ಪ್ರಧಾನಿ ಮೋದಿಗೆ ಮನವಿ ಮಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ದಿ ಸಂಘದಿಂದ ಪ್ರತಿಭಟನೆ
ತುಘಲಕಾಬಾದ್ ಪ್ರದೇಶದ ಕಟ್ಟಡ ವಿನಾಶಗೊಳಿಸಿ ಸಮಸ್ತ ಚಮ್ಮಾರ ಸಮುದಾಯದ ಭಾವನೆಗಳಿಗೆ ತೀವ್ರ ಧಕ್ಕೆ ಉಂಟು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿ ಅಪಮಾಸಿದ್ದಾರೆ ಎಂದು ಆರೋಪಿಸಿದರು.