ಧಾರವಾಡ:ಭೀಮಾ ಕೋರೆಗಾಂವ್ ಸಂಭ್ರಮಾಚರಣೆ ವೇಳೆ ಸಂಶಾಸ್ಪದವಾಗಿ ಬಂಧಿಸಿದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಮರಸ ವೇದಿಕೆ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭೀಮಾ ಕೋರೆಗಾಂವ್ ಸಂಘರ್ಷದಲ್ಲಿ ಬಂಧಿಸಿದವರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ - ಧಾರವಾಡ ಪ್ರತಿಭಟನೆ ಸುದ್ದಿ
ಭೀಮಾ ಕೋರೆಗಾಂವ್ ಸಂಭ್ರಮಾಚರಣೆ ಸಂಘರ್ಷದಲ್ಲಿ ಸಂಶಾಸ್ಪದವಾಗಿ ಬಂಧಿಸಿದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಮರಸ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭೀಮಾ ಕೋರೆಗಾಂವ್ ಸಂಘರ್ಷದಲ್ಲಿ ಬಂಧಿಸಿದವರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
ತಹಶೀಲ್ದಾರ್ ಡಾ. ಸಂತೋಷ ಬಿರಾದಾರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರ ಸ್ವಾಮಿ ಸ್ಟ್ಯಾನ್ ಅವರ ಮೇಲೆ ದೇಶ ವಿರೋಧಿ ಆರೋಪ ಹೊರಿಸಿ ಬಂಧನ ಮಾಡಿರುವುದು ಖಂಡನೀಯ. ಪುಣೆಯಲ್ಲಿ 2008ರಲ್ಲಿ ನಡೆದ ಭೀಮಾ ಕೋರೆಗಾಂವ್ ಸಂಭ್ರಮಾಚರಣೆ ಸಂಘರ್ಷದಲ್ಲಿ ಸ್ವಾಮಿ ಸ್ಟ್ಯಾನ್ ಸೇರಿ 11 ಮಂದಿ ಮಾನವ ಹಕ್ಕುಗಳ ಹೋರಾಟಗಾರರನ್ನು ಅರ್ಬನ್ ನಕ್ಸಲೈಟ್ಗಳ ಜೊತೆ ಕೈವಾಡವಿದೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಆದರೆ, ಅವರು ಆರೋಪಿಗಳಲ್ಲ. ಕೂಡಲೇ ಬಂಧಿಸಿದ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.