ಹುಬ್ಬಳ್ಳಿ:ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ನೂತನವಾಗಿ ಟೋಲ್ ಸಂಗ್ರಹಿಸುವುದನ್ನು ಖಂಡಿಸಿ ದಿ. ಸಿ.ಎಸ್.ಶಿವಳ್ಳಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಕುಂದಗೋಳ ಬಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ಟೋಲ್ ಸಂಗ್ರಹ: ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ - ಕುಂದಗೋಳ ಬಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ
ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ನೂತನವಾಗಿ ಟೋಲ್ ಸಂಗ್ರಹಿಸುವುದನ್ನು ಖಂಡಿಸಿ ದಿ. ಸಿ.ಎಸ್.ಶಿವಳ್ಳಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಕುಂದಗೋಳ ಬಳಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
![ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ಟೋಲ್ ಸಂಗ್ರಹ: ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ protest-by-locals-for-new-toll-collection-on-laxmeshwara-state-highway-73-in-hubballi](https://etvbharatimages.akamaized.net/etvbharat/prod-images/768-512-5543922-thumbnail-3x2-sanju.jpg)
ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ನೂತನ ಟೋಲ್ ಸಂಗ್ರಹ...ಸ್ಥಳೀಯರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ...
ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ಟೋಲ್ ಸಂಗ್ರಹಕ್ಕೆ ಖಂಡನೆ
ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಅವರು, ತಾಲೂಕಿನ ಗ್ರಾಮೀಣ ಭಾಗಗಳಿಂದ ಬರುವ ರೈತರಿಗೆ, ಬಡ ಕೂಲಿ ಕಾರ್ಮಿಕರಿಗೆ ಟೋಲ್ ಸಂಗ್ರಹದಿಂದ ನಿತ್ಯ ತೊಂದರೆಯಾಗಲಿದೆ. ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿದರು.
ರಸ್ತೆ ಬಂದ್ ಮಾಡಿದ್ದರಿಂದ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.