ಹುಬ್ಬಳ್ಳಿ:ಲಡಾಕ್ ಗಡಿಯಲ್ಲಿ ಚೀನಾ ನಡೆಸಿದ ದಾಳಿಯನ್ನು ಖಂಡಿಸಿ ಜಿಲ್ಲಾ ಕೇಂದ್ರದಿಂದ ರಕ್ಷಣಾ ವೇದಿಕೆ ವಕೀಲರ ಸಂಘವು ಚೀನಾ ಅಧ್ಯಕ್ಷರ ಭಾವಚಿತ್ರ ಹಾಗೂ ಚೀನಾ ವಸ್ತುಗಳನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.
ನಗರದ ನೂತನ ನ್ಯಾಯಾಲಯದ ಸಂಕೀರ್ಣದ ಎದುರು ಪ್ರತಿಭಟನೆ ನಡೆಸಿದ ವಕೀಲರು, ಚೀನಾ ವಿರುದ್ಧ ಘೋಷಣೆ ಕೂಗಿ, ಚೀನಾವನ್ನು ಶತ್ರು ರಾಷ್ಟ್ರವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಈ ಕೂಡಲೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ವಸ್ತುಗಳನ್ನು ನಿಷೇಧಿಸಬೇಕು ಎಂದರು.
ಓದಿ:ಇಡೀ ರಾತ್ರಿ ಕೈಯಲ್ಲೇ ಗ್ಲೂಕೋಸ್ ಬಾಟಲಿ ಹಿಡಿದ ರೋಗಿ: ಹುಬ್ಬಳ್ಳಿ ಕಿಮ್ಸ್ನಲ್ಲಿ ಮತ್ತೊಂದು ಎಡವಟ್ಟು!
ದೇಶದ ಎಲ್ಲ ಪ್ರಜೆಗಳು ಚೀನಾ ಆ್ಯಪ್ ಗಳನ್ನು ಡಿಲಿಟ್ ಮಾಡಬೇಕೆಂದು ಕರೆ ಕೊಟ್ಟ ವಕೀಲರು, ಚೀನಾದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು, ಚೀನಾ ವಿರುದ್ಧ ಎಲ್ಲರೂ ಒಗ್ಗಟ್ಟಿನ ಮೂಲಕ ಹೋರಾಡ ಮಾಡಬೇಕು ಎಂದರು. ದೇಶದ ರಕ್ಷಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಯಾವುದೇ ನಿರ್ಧಾರ ಕೈಗೊಂಡರು ಅದಕ್ಕೆ ಪ್ರಜೆಗಳ ಬೆಂಬಲವಿದೆ ಎಂದು ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಅನ್ವೇಕರ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.