ಕರ್ನಾಟಕ

karnataka

ETV Bharat / state

ರಾಯಣ್ಣನ ಪುತ್ಥಳಿ ತೆರವು ಖಂಡಿಸಿ ಕುರುಬ ನೌಕರರ ಸಂಘದಿಂದ ಪ್ರತಿಭಟನೆ - ಕುರುಬ ನೌಕರರ ಸಂಘದಿಂದ ಧಾರವಾಡದಲ್ಲಿ ಪ್ರತಿಭಟನೆ

ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ತೆರವುಗೊಳಿಸಿರುವುದನ್ನು ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Protest by Kuruba Employees Union in Dharwad
ರಾಯಣ್ಣನ ಪುತ್ಥಳಿ ತೆರವು ಖಂಡಿಸಿ ಧಾರವಾಡಲ್ಲಿ ಪ್ರತಿಭಟನೆ

By

Published : Aug 24, 2020, 12:12 PM IST

ಧಾರವಾಡ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸಿದ್ದನ್ನು ವಿರೋಧಿಸಿ ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ತೆರವುಗೊಳಿಸಿದ್ದು ಖಂಡನಾರ್ಹ. ಇದಕ್ಕೆ ಸಂಬಂಧಪಟ್ಟ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ

ರಾಯಣ್ಣನ ಪುತ್ಥಳಿಯನ್ನು ಅದೇ ಗ್ರಾಮದಲ್ಲಿ ಮರುಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details