ಧಾರವಾಡ :ರೈಲ್ವೆ ಖಾಸಗೀಕರಣ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಧಾರವಾಡದ ರೈಲ್ವೆ ನಿಲ್ದಾಣದ ಬಳಿ ಇಂದು ಪ್ರತಿಭಟನೆ ನಡೆಸಲಾಯಿತು.
ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಪ್ರಪಂಚದಲ್ಲಿ ನಾಲ್ಕನೇ ಅತಿದೊಡ್ಡ ಸೇವಾ ಜಾಲ. ದೇಶದ ಆರ್ಥಿಕತೆಯ ದೊಡ್ಡ ಜೀವನಾಡಿ.
ಜನರಿಗೆ ಸುಲಭ ದರದಲ್ಲಿ ಪ್ರಯಾಣ ಸೌಕರ್ಯ ಕಲ್ಪಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು.
ರೈಲ್ವೆ ಖಾಸಗೀಕರಣ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಜನಸಾಮಾನ್ಯರಿಗೆ ಸುರಕ್ಷಿತ ಸೇವೆ ಒದಗಿಸಬಲ್ಲ ರೈಲ್ವೆಯನ್ನು ಕೊಳ್ಳೆ ಹೊಡೆಯಲು ಲೂಟಿಕೋರರ ತೆಕ್ಕೆಗೆ ಒಪ್ಪಿಸುವ ಕೇಂದ್ರದ ವಿನಾಶಕಾರಿ ಕ್ರಮಗಳ ವಿರುದ್ಧ ಎಲ್ಲಾ ಜನಸಾಮಾನ್ಯರು ಬಲಿಷ್ಠ ಅವಿರತ ಹೋರಾಟ ಮಾಡಬೇಕು ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡರು ಮನವಿ ಮಾಡಿಕೊಂಡರು.