ಕರ್ನಾಟಕ

karnataka

ETV Bharat / state

ಕನಕ ಗುರು ಪೀಠದ ಶ್ರೀಗಳಿಗೆ ಅಪಮಾನ ಆರೋಪ: ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಹಾಗೂ ಹಾಲಮತ ಸಮಾಜದ ಬಗ್ಗೆ ಅವವಹೇಳನ ಮಾಡಿದ್ದಾರೆಂದು ಆರೋಪಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ : ಹುಬ್ಬಳ್ಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

By

Published : Nov 20, 2019, 1:39 PM IST

ಹುಬ್ಬಳ್ಳಿ: ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಹಾಗೂ ಹಾಲಮತ ಸಮಾಜದ ಬಗ್ಗೆ ಅವವಹೇಳನ ಮಾಡಿದ್ದಾರೆಂದು ಆರೋಪಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನಕ ಗುರು ಪೀಠದ ಶ್ರೀಗಳಿಗೆ ಅವಮಾನ‌ ಆರೋಪ: ಹುಬ್ಬಳ್ಳಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಕನಕ ಜಯಂತಿ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾರ್ಯಕ್ರಮದುದ್ದಕ್ಕೂ ಕನಕ ಗುರು ಪೀಠದ ಸ್ವಾಮಿಗಳಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದಲ್ಲದೇ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.‌ ಅಲ್ಲದೇ ಕನಕ ಜಯಂತಿಯ ಮೂರು ದಿನಗಳ ಮುಂಚೆ ಕನಕ ದಾಸರ ವೃತ್ತದಲ್ಲಿ ಕನಕ ದಾಸರ ಬೋರ್ಡ್ ತೆರವುಗೊಳಿಸಿ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಕ್ಷಣವೇ ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇನ್ನು ಸರ್ಕಾರ ಈ ಬಗ್ಗೆ ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಆ ಹೋರಾಟದಲ್ಲಿ ಸರ್ಕಾರಿ ಆಸ್ತಿ-ಪಾಸ್ತಿಗೆ ಧಕ್ಕೆ ಆದರೆ ಅದಕ್ಕೆ ಸಚಿವ ಮಾಧುಸ್ವಾಮಿಯೇ ನೇರ ಹೊಣೆಯಾಗಲಿದ್ದಾರೆ. ಕೂಡಲೇ ರಾಜ್ಯಪಾಲರು ಮಾಧುಸ್ವಾಮಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ABOUT THE AUTHOR

...view details