ಕರ್ನಾಟಕ

karnataka

ETV Bharat / state

ಶಿಕ್ಷಣ ಇಲಾಖೆಯ ವಿರುದ್ಧ ಸಮತಾ ಸೈನಿಕದಳ ಪ್ರತಿಭಟನೆ

ಕರ್ನಾಟಕ ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ ಡಾ.ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿವಾದದ ಕಾವು ಜೋರಾಗಿದೆ. ಉತ್ತರ ಕರ್ನಾಟಕ ಸಮತಾ ಸೈನಿಕದಳ ಹಾಗೂ ಅಂಬೇಡ್ಕರ್ ಯುವ ಹೋರಾಟ ಸಮಿತಿಗಳ ಸಹಯೋಗದಲ್ಲಿ ಗುರುವಾರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ಶಿಕ್ಷಣ ಇಲಾಖೆಯ ವಿರುದ್ಧ ಸಮತಾ ಸೈನಿಕದಳ ಪ್ರತಿಭಟನೆ

By

Published : Nov 15, 2019, 1:07 PM IST

ಹುಬ್ಬಳ್ಳಿ: ಕರ್ನಾಟಕ ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ ಡಾ.ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿವಾದದ ಕಾವು ಜೋರಾಗಿದ್ದು, ಕೂಡಲೇ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಮತ್ತು ಆಯುಕ್ತರನ್ನು ವಜಾಗೊಳಿಸುವಂತೆ ಆಗ್ರಹಿಸಿ ‌ಉತ್ತರ ಕರ್ನಾಟಕ ಸಮತಾ ಸೈನಿಕದಳ ಹಾಗೂ ಅಂಬೇಡ್ಕರ್ ಯುವ ಹೋರಾಟ ಸಮಿತಿಗಳ ಸಹಯೋಗದಲ್ಲಿ ಗುರುವಾರದಂದು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ಶಿಕ್ಷಣ ಇಲಾಖೆ ವಿರುದ್ಧ ಸಮತಾ ಸೈನಿಕದಳ ಪ್ರತಿಭಟನೆ

ಈ ರೀತಿ ಹೇಳುವುದು ದೇಶದ ಪ್ರಜಾಪ್ರಭುತ್ವಕ್ಕೆ ಹಾಗೂ ದೇಶದ ಪವಿತ್ರ ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ. ಅಲ್ಲದೇ ಶಿಕ್ಷಣ ಇಲಾಖೆಯ ಸುತ್ತೋಲೆಯ ಕೈಪಿಡಿಯಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಇಂತಹ ವಿವಾದಾತ್ಮಕ ನಿರ್ಧಾರವನ್ನು ಕೈಬಿಟ್ಟು ಕೂಡಲೇ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ತಹಶಿಲ್ದಾರ್​ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details