ಧಾರವಾಡ: ನಗರದ 8 ಜನ ಶಿಕ್ಷಕರಿಗೆ ಕೊರೊನಾ ಹರಡಿರುವುದು ಒಬ್ಬ ನರ್ಸ್ನಿಂದ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟನೆ ನೀಡಿದ್ದಾರೆ.
ಧಾರವಾಡದ 8 ಶಿಕ್ಷಕರಿಗೆ ಸೋಂಕು ತಗುಲಲು ನರ್ಸ್ ಕಾರಣ: ಡಿಸಿ ದೀಪಾ ಚೋಳನ್ ಸ್ಪಷ್ಟನೆ - D C Deepa cholan talk about corona
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಜನರು ಭಯ ಪಡುವುದು ಬೇಡ. ಜಿಲ್ಲಾಡಳಿತ ಸೋಂಕು ಹತೋಟಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಭಯ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ನೂತನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ (ವೈದ್ಯಕೀಯ ಸಹಾಯಕ) ನಿಂದ ಅವರ ಪತ್ನಿಗೆ ಸೋಂಕು ತಗುಲಿದೆ. ಈ ನರ್ಸ್ ಪತ್ನಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದು, ಅವರು ಶಾಲೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರಿಂದ ಉಳಿದ ಶಿಕ್ಷಕರಿಗೆ ಸೋಂಕು ಹರಡಿದೆ ಎಂದು ತಿಳಿಸಿದರು.
ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಜನರು ಭಯ ಪಡುವುದು ಬೇಡ. ಜಿಲ್ಲಾಡಳಿತ ಸೋಂಕು ಹತೋಟಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಹಗಲಿರುಳು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಅವರು, ಕಿಮ್ಸ್ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.