ಧಾರವಾಡ: ತೆಂಗಿನ ಮರದ ಮೇಲಿಂದ ಹಾರಿ ಕೈದಿಯೋರ್ವ ಮೃತಪಟ್ಟ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಗುಣಮಟ್ಟದ ಆಹಾರದ ನೀಡುವಂತೆ ಒತ್ತಾಯ: ತೆಂಗಿನ ಮರದಿಂದ ಜಿಗಿದ ಕೈದಿ ಸಾವು - ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಸಾವು
ತೆಂಗಿನ ಮರದ ಮೇಲಿಂದ ಹಾರಿ ಕೈದಿಯೋರ್ವ ಮೃತಪಟ್ಟ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಚೇತನ್‌ಕುಮಾರ(20) ಮೃತಪಟ್ಟ ಕೈದಿ. ಈತ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ನಿವಾಸಿ. 2015 ರಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತನಾಗಿದ್ದ. ಈ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಅಪರಾಧಿಗೆ 10 ವರ್ಷ ಶಿಕ್ಷೆ ನೀಡಿತ್ತು. ಹೀಗಾಗಿ ಕಳೆದ ಐದು ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಈತನನ್ನು ಆರು ತಿಂಗಳ ಹಿಂದೆ ಬಳ್ಳಾರಿ ಜೈಲಿನಿಂದ ಧಾರವಾಡಕ್ಕೆ ಶಿಫ್ಟ್ ಮಾಡಲಾಗಿತ್ತು.
ಕಳೆದ ವಾರ ತೆಂಗಿನ ಮರವೇರಿ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಇಂದೂ ಸಹ ಮರವೇರಿದ್ದ ಚೇತನ್ ಮೇಲಿನಿಂದ ಜಿಗಿದಿದ್ದಾನೆ. ಈ ವೇಳೆ ತಲೆಗೆ ತೀವ್ರ ತೆರನಾದ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.