ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ದ ಹೋರಾಡಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ : ಡಿಸಿ ನಿತೇಶ್ ಪಾಟೀಲ - DC Nitesh Patil talk about prime minister narendra modi suggestion

ಕೊರೊನಾ ಮುಕ್ತ ಗ್ರಾಮ ಅಭಿಯಾನ ಮಾಡುತ್ತೇವೆ. ಹಳ್ಳಿ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡುತ್ತೇವೆ. ಆಯಾ ಗ್ರಾಪಂ ಮಟ್ಟದ ಟಾಸ್ಕ್‌ಪೋರ್ಸ್‌ಗೆ ಹೆಚ್ಚಿನ ಅಧಿಕಾರ ಕೊಡುತ್ತೇವೆ..

dc-nitesh-patil
ಡಿಸಿ ನಿತೇಶ್ ಪಾಟೀಲ

By

Published : May 18, 2021, 6:15 PM IST

ಧಾರವಾಡ : ಪ್ರಧಾನಿಗಳು ಹಲವಾರು ಸಲಹೆ ಕೊಟ್ಟಿದ್ದಾರೆ. ಜನಪ್ರತಿನಿಧಿಗಳನ್ನು ಬಳಸಿಕೊಂಡು ಕೊರೊನಾ ವಿರುದ್ಧ ಹೋರಾಡಲು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಆಯುಷ್ ಔಷಧಿಗಳನ್ನು ಬಳಸಿಕೊಳ್ಳಲು ಹೇಳಿದ್ದಾರೆ.‌

ಮೈಕ್ರೋ ಕಂಟೇನ್ಮೆಂಟ್ ಝೋನ್‌ಗಳಿಗೆ ಸಲಹೆ ನೀಡಿರುವ ಅವರು, ಹಳ್ಳಿಗಳಿಗೆ ಜಾಸ್ತಿ ಒತ್ತು ಕೊಡಲು ಹೇಳಿದ್ದಾರೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿದರು..

ಕೊರೊನಾ ಮುಕ್ತ ಗ್ರಾಮ ಅಭಿಯಾನ ಮಾಡುತ್ತೇವೆ. ಹಳ್ಳಿ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡುತ್ತೇವೆ. ಆಯಾ ಗ್ರಾಪಂ ಮಟ್ಟದ ಟಾಸ್ಕ್‌ಪೋರ್ಸ್‌ಗೆ ಹೆಚ್ಚಿನ ಅಧಿಕಾರ ಕೊಡುತ್ತೇವೆ ಎಂದ ಅವರು, ಮೈಕ್ರೋ ಕಂಟೇನ್​ಮೆಂಟ್​ ಝೋನ್ ಮಾಡಲು ಗ್ರಾಪಂ ಮಟ್ಟದಲ್ಲಿ ಅಧಿಕಾರ ಕೊಡುತ್ತೇವೆ ಎಂದು ತಿಳಿಸಿದರು.

ಇದು ಲಾಕ್‌ಡೌನ್​ಗಿಂತಲೂ ಕಠಿಣವಾದ ನಿರ್ಬಂಧ ಆಗಿದ್ದು, ರ್ಯಾಪಿಡ್ ಕಿಟ್‌ಗಳನ್ನು ಗ್ರಾಪಂಗೆ ನೀಡುತ್ತೇವೆ. ಅಯುರ್ ಮೆಡಿಕಲ್‌ವುಳ್ಳ ಔಷಧಿಯ ಕಿಟ್ ಕೊಡುತ್ತೇವೆ ಎಂದು ವಿವರಿಸಿದರು.

ಓದಿ:ಕೊರೊನಾ ಮುಕ್ತ ಗ್ರಾಮಕ್ಕೆ 25 ಸಾವಿರ ರೂ‌. ಬಹುಮಾನ: ಡಿಸಿ ರೋಹಿಣಿ ಸಿಂಧೂರಿ ಘೋಷಣೆ

ABOUT THE AUTHOR

...view details