ಹುಬ್ಬಳ್ಳಿ: ಸಾಮಾನ್ಯವಾಗಿ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸುವುದು, ಸಿಹಿ ಹಂಚುವುದು, ಊಟ, ಉಪಹಾರ ವಿತರಿಸುವುದನ್ನು ನಾವೆಲ್ಲ ಕೇಳಿದ್ದೇವೆ. ನೋಡಿದ್ದೇವೆ. ಆದರೆ, ಇಲ್ಲಿ ಆಕಳುಗಳಿಗೆ ಸಿಂಗರಿಸಿ, ಅವುಗಳ ಸೀಮಂತ ಮಾಡುವುದರ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಯಿತು.
ಆಕಳುಗಳಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಮೋದಿ ಜನ್ಮ ದಿನಾಚರಣೆ! - prime minister modi birth day
ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಅಮರಗೋಳದಲ್ಲಿ ಆಕಳುಗಳಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಮೋದಿ ಜನ್ಮ ದಿನಾಚರಣೆ ಅಂಗವಾಗಿ ಆಕಳುಗಳಿಗೆ ಸೀಮಂತ ಕಾರ್ಯ
ಹುಬ್ಬಳ್ಳಿಯ ಅಮರಗೋಳದಲ್ಲಿ ಈ ಸಂಭ್ರಮ ಕಂಡು ಬಂತು. ಗೌರಿ, ಗಂಗೆ, ಲಕ್ಷ್ಮಿ ಈ ಹೆಸರುಗಳನ್ನು ಆಕಳುಗಳಿಗೆ ಇರಿಸಿದ್ದಾರೆ. ಇವುಗಳನ್ನು ಅಲಂಕಾರಗೊಳಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಹೂ ಮೂಡಿಸಿ, ಸೀರೆ ತೊಡಿಸಿ ಅವುಗಳ ಇಷ್ಟದ ಆಹಾರವನ್ನು ತಿನ್ನಿಸಲಾಯಿತು.
ಇನ್ನೂ ಸೋಬಾನ ಪದಗಳನ್ನು ಹಾಡುತ್ತಾ ಮಹಿಳೆಯರು ಆರತಿ ಬೆಳಗುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.