ಹುಬ್ಬಳ್ಳಿ:ಮಣಿಪುರದಲ್ಲಿ ಜಾತಿ, ಧರ್ಮ ಸಂಘರ್ಷವೂ ನಡೀತಾ ಇದೆ. ಹಿಂದಿನ ಸರ್ಕಾರಗಳ ತಪ್ಪುಗಳ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಬೇರೆ ದೇಶದ ನುಸುಳುಕೋರರು ದಕ್ಷಿಣ ಭಾಗದಲ್ಲಿ ಜಮೆ ಆಗಿದ್ದಾರೆ. ಇವತ್ತು ನುಸುಳುಕೋರರನ್ನು ಹೊರ ಹಾಕುವ ಕೆಲಸ ಕೇಂದ್ರ ಸರ್ಕಾರ ನಿರಂತರ ಮಾಡ್ತಾ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯವೇ ಕಾರಣ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶಾನ್ಯ ಭಾಗದ ಎಲ್ಲ ರಾಜ್ಯಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ನಾರ್ತ್ ಈಸ್ಟ್ ನಲ್ಲಿ ಭಾರತೀಯರು ಅಂತ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಇಡೀ ನಾರ್ತ್ ಈಸ್ಟ್ ಎಲ್ಲ ರಾಜ್ಯಗಳಲ್ಲಿ ನಮ್ಮ ಭಾರತ ಅಂತಾರೆ. ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಹ ನಡೀತಾ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅವರು ನೋಡ್ತಾ ಇದ್ದಾರೆ. ಹೀಗಾಗಿ ವಿದ್ರೋಹಿ ಚಟುವಟಿಕೆ ನಡೆಸೋದಕ್ಕೆ ಅಲ್ಲಿಗೆ ಬರ್ತಾರೆ. ಕೇಂದ್ರ ಸರ್ಕಾರ ನಾರ್ತ್ ಈಸ್ಟ್ನ ಎಲ್ಲಾ ರಾಜ್ಯಗಳಲ್ಲಿ ಶಾಂತಿ ನೆಲೆಸಬೇಕು. ಅವರು ಭಾರತ ಒಂದು ಭಾಗ ಆಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯ ಅವರಿಗೆ ಸಿಗಬೇಕು ಎಂದರು.
ಕೇಂದ್ರ ಸರ್ಕಾರದ ಹೆಸರು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ: ಪಾರ್ಲಿಮೆಂಟ್ ನಲ್ಲಿ ಚರ್ಚೆ ಬಿಟ್ಟು ಹೊರಗೆ ಚರ್ಚೆ ಮಾಡೋಕೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮಾಡ್ತಾ ಇವೆ. ಯಾವುದೇ ಉತ್ತರಕ್ಕೂ ಭಾರತ ಸರ್ಕಾರ ಸಿದ್ದ ಇದೆ. ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ಮಹಿಳೆಯಾರನ್ನು ಬೆತ್ತಲೆಗೊಳಿಸಿದ ಪ್ರಕರಣ ಹೊರ ಬರ್ತಾ ಇದೆ. ರಾಜಕಾರಣ ಎಲ್ಲರೂ ಮಾಡ್ತಾರೆ. ಕೊಲ್ಲುವ ರಾಜಕಾರಣ ಪಶ್ಚಿಮಬಂಗಾಳದಲ್ಲಿ ನಡೀತಾ ಇದೆ. ಕೇಂದ್ರ ಸರ್ಕಾರದ ಹೆಸರು ಕೆಟ್ಟದಾಗಿ ಬಿಂಬಿಸುವ ಕೆಲಸ ನಡೀತಾ ಇದೆ ಎಂದು ತಿಳಿಸಿದರು.
ಜ್ಞಾನವ್ಯಾಪಿ ಮಸೀದಿ ಸರ್ವೆಗೆ ಕೋರ್ಟ್ ಅನುಮತಿ ವಿಚಾರ: ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜ್ಞಾನವ್ಯಾಪಿ ಮಸೀದಿ, ಕಾಶಿಯ ಒಂದು ಭಾಗ, ಜೀವನದಲ್ಲಿ ಒಂದು ದಿನವಾದರೂ ಕಾಶಿ ಯಾತ್ರೆಗೆ ಹೋಗಬೇಕು ಎನ್ನುವುದು ಹಿಂದೂಗಳ ಅಪೇಕ್ಷೆ ಎಂದರು. ಅಲ್ಲಿಂದ ಹಲವಾರು ಹಿಂದೂ ದೇವಾಲಯ ಧ್ವಂಸ ಮಾಡಲಾಗಿತ್ತು. ಧ್ವಂಸ ಮಾಡಿದ ದೇವಸ್ಥಾನದ ಕಂಬಗಳ ಮೇಲೆ ಮಸೀದಿಗಳ ನಿರ್ಮಾಣ ಮಾಡಲಾಯಿತು. ಇನ್ನು ಕಾಶಿಯ ಜ್ಞಾನವ್ಯಾಪಿ ಮಸೀದಿ ಕುರಿತು ನ್ಯಾಯಾಲಯದ ತೀರ್ಪು ಸ್ವಾಗತಾರ್ಹ ಎಂದು ಹೇಳಿದರು.