ಕರ್ನಾಟಕ

karnataka

ETV Bharat / state

'ಬಂಡವಾಳ ಹೂಡಿ ಬಿಜೆಪಿ ಸರ್ಕಾರ ರಚಿಸಿದೆ, ಹತ್ತಿಪ್ಪತ್ತು ಕೈ ನಾಯಕರು ಸಿಎಂ ಸೂಟ್‌ಗೆ ಆರ್ಡರ್ ಕೊಟ್ಟಿದ್ದಾರೆ' - President of the State Farmers Union Badagalpura Nagendra on BJP

ಬಂಡವಾಳ ಹೂಡಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇತ್ತ ಈಗಾಗಲೇ ಕಾಂಗ್ರೆಸ್‌ನಲ್ಲಿ ಹತ್ತಿಪ್ಪತ್ತು ಜನ ಸಿಎಂ ಸೂಟ್‌ಗೆ ಆರ್ಡರ್ ಕೊಟ್ಟಿದ್ದಾರೆ. ನಾನು ಸಿಎಂ, ನೀನು ಸಿಎಂ ಅಂತಾ ಬೀದಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

President of the State Farmers Union Badagalpura Nagendra
ಬಡಗಲಪುರ ನಾಗೇಂದ್ರ ಲೇವಡಿ

By

Published : Jul 6, 2021, 3:55 PM IST

Updated : Jul 6, 2021, 5:13 PM IST

ಧಾರವಾಡ:ಬಂಡವಾಳ ಹೂಡಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಸಚಿವರಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಹತ್ತಿಪ್ಪತ್ತು ಜನ ಸಿಎಂ ಸೂಟ್‌ಗೆ ಆರ್ಡರ್ ಕೊಟ್ಟಿದ್ದಾರೆ. ಪ್ರಮಾಣ ವಚನ ಸ್ವೀಕರಿಸಲು ಅವರು ಡ್ರೆಸ್ ಹಾಕಿಕೊಳ್ಳಬೇಕಲ್ವಾ? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಲೇವಡಿ ಮಾಡಿದ್ದಾರೆ.

ಬಡಗಲಪುರ ನಾಗೇಂದ್ರ ಲೇವಡಿ

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷ ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ. ಜನ ಬಹುಮತವನ್ನೇ ಕೊಟ್ಟಿಲ್ಲ ಆದರೂ 10 ರಿಂದ 20 ಜನ ಸಿಎಂ ಕನಸು ಹೊತ್ತಿದ್ದಾರೆ. ಚುನಾವಣೆ ಇನ್ನೂ ಎರಡು ವರ್ಷ ಇದೆ ಎಂದು ಹರಿಹಾಯ್ದರು.

ಆಗಲೆ ಮುಂಬೈ, ಮೈಸೂರು, ದೆಹಲಿ, ಬೆಂಗಳೂರು, ಕೊಲ್ಕತಾ ಟೇಲರ್ ಅಂಗಡಿಗೆ ಶೂಟ್ ಆರ್ಡರ್ ಕೊಟ್ಟಿದ್ದಾರೆ. ನಾನು ಸಿಎಂ, ನೀನು ಸಿಎಂ ಅಂತಾ ಬೀದಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Jul 6, 2021, 5:13 PM IST

For All Latest Updates

TAGGED:

ABOUT THE AUTHOR

...view details