ಧಾರವಾಡ :ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದೂರು ದಾಖಲಾದ ಪ್ರಕರಣ ಸಂಬಂಧ ಧಾರವಾಡದ ಗ್ರಾಮೀಣ ಠಾಣಾ ಇನ್ಸ್ಸ್ಪೆಕ್ಟರ್ ಶ್ರೀಧರ ಸತಾರೆ ಅವರನ್ನು ಅಮಾನತು ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಗಲಾಟೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮದುಸೂಧನ್ ಎಂಬುವರು ಶಿಕ್ಷಣ ಸಂಸ್ಥೆಯ ಐದು ಜನರ ಮೇಲೆ ಪ್ರಕರಣ ದಾಖಲಿಸಿದ್ದರು. ಅದರಲ್ಲಿ ಸಭಾಪತಿ ಹೊರಟ್ಟಿ ಐದನೇ ಆರೋಪಿಯನ್ನಾಗಿಸಿ ದೂರು ದಾಖಲಿಸಲಾಗಿತ್ತು.