ಧಾರವಾಡ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವೀರ್ ಸಾವರ್ಕರ್ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಗಣೇಶೋತ್ಸವ ಹಿನ್ನೆಲೆಯಲ್ಲಿ ಪೆಂಡಾಲ್ಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲಿನ ಶಿವಾಜಿ ವೃತ್ತದ ಗಣೇಶ ಮಂಡಳಿ ಸೇರಿದಂತೆ ವಿವಿಧ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಮುತಾಲಿಕ್, ಭಾವಚಿತ್ರಗಳನ್ನು ಹಂಚಿದರು.
ಹಲಾಲ್ ಮುಕ್ತ ಗಣೇಶ ಹಬ್ಬ ಮಾಡಬೇಕು: ಸಾವರ್ಕರ್ ಭಾವಚಿತ್ರ ಹಂಚಿದ ಮುತಾಲಿಕ್
ಗೌರಿ-ಗಣೇಶ ಹಬ್ಬವನ್ನು ಹಲಾಲ್ ಮುಕ್ತ ಮಾಡಬೇಕು ಎಂದಿರುವ ಪ್ರಮೋದ್ ಮುತಾಲಿಕ್, ಗಣೇಶ ಮಂಡಳಿಗಳಿಗೆ ಸಾವರ್ಕರ್ ಭಾವಚಿತ್ರಗಳನ್ನು ಹಂಚಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ 25 ಗಣೇಶ ಮಂಡಳಿಗಳಿಗೆ ಸಾವರ್ಕರ್ ಭಾವಚಿತ್ರ ಕೊಟ್ಟಿದ್ದೇವೆ. ಮೊದಲನೇ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಕೂಡಾ ಕೊಟ್ಟಿದ್ದೇವೆ. ಮಂಡಳಿ ರಚಿಸಿ ಅವರಲ್ಲಿ ದೇಶ ಭಕ್ತಿ ಮೂಡಿಸುವುದು, ರಾಷ್ಟ್ರಗೀತೆ ಹಾಡಿಸುವುದು, ರಾಷ್ಟ್ರೀಯ ಹಬ್ಬ ಆಚರಣೆ ಮಾಡುವಂತದ್ದು ಸರಿ. ಈ ಹಿಂದೆ ಸಿದ್ದರಾಮಯ್ಯ 50 ಕೋಟಿ ರೂ ಅನುದಾನ ಕೊಟ್ಟಿದ್ದರು. ಅದನ್ನು ಜಾರಿಗೆ ತರಲು ಹೊರಟಿದ್ದಕ್ಕೂ ಸ್ವಾಗತವಿದೆ. ಗಣೇಶ ಹಬ್ಬವನ್ನು ಹಲಾಲ್ ಮುಕ್ತ ಮಾಡಬೇಕು. ಬೇರೆ ಕೋಮಿನವರ ಜೊತೆ ವ್ಯಾಪಾರ ಮಾಡಕೂಡದು. ಹೂವು, ಹಣ್ಣು ಅಥವಾ ಲೈಟಿಂಗ್ ಸೌಂಡ್ ಸಿಸ್ಟಮ್ ಎಲ್ಲ ನಮ್ಮ ಸಮುದಾಯದವರಿಂದಲೇ ತರಬೇಕು ಎಂದು ಮುತಾಲಿಕ್ ಕರೆ ಕೊಟ್ಟರು.
ಇದನ್ನೂ ಓದಿ:ಗಾಂಧಿಯನ್ನು ಕೊಂದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು: ಸಿ ಟಿ ರವಿ