ಧಾರವಾಡ: ತಿರುಪತಿ ತಿಮ್ಮಪ್ಪನ ದೇವಸ್ಥಾನ ಆಸ್ತಿ ಮಾರಾಟ ವಿರೋಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ರವಾನಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಆಸ್ತಿ ಮಾರಿದ್ರೆ ಶಾಪ ತಟ್ಟುತ್ತೆ: ಆಂಧ್ರ ಸಿಎಂ ವಿರುದ್ಧ ಮುತಾಲಿಕ್ ಕಿಡಿ - ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಸ್ತಿ ಮಾರಾಟಕ್ಕೆ ಸಿದ್ಧತೆ
ಆಂಧ್ರ ಪ್ರದೇಶ ಸಿಎಂ ಜಗನಮೋಹನ್ ರೆಡ್ಡಿ ಅವರ ಕಣ್ಣು ತಿರುಪತಿ ತಿಮ್ಮಪ್ಪನ ಆಸ್ತಿ ಮೇಲೆ ಬಿದ್ದಿದೆ. ಅವರೇನಾದರೂ ತಿಮ್ಮಪ್ಪನ ಆಸ್ತಿ ಮಾರಾಟಕ್ಕೆ ಮುಂದಾದ್ರೆ ಶಾಪ ತಟ್ಟುತ್ತೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್
ತಿರುಪತಿ ತಿಮ್ಮಪ್ಪನ ದೇವಸ್ಥಾನ ಉಳಿಸಿ ಅಭಿಯಾನದ ಪ್ರಯುಕ್ತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಜಗನ್ ಅವರ ಕಣ್ಣು ಕೇವಲ ದೇವಸ್ಥಾನಗಳ ಆಸ್ತಿ ಮೇಲೆ ಅಷ್ಟೇ ಏಕೆ ಎಂದು ಪ್ರಶ್ನಿಸಿದರು.
ತಿರುಪತಿ ದೇವಸ್ಥಾನ ಕೇವಲ ಆಂಧ್ರದ ಆಸ್ತಿ ಅಲ್ಲ, ಅದು ದೇಶದ ಹಾಗೂ ಜನರ ಆಸ್ತಿ ಎಂದು ಮುತಾಲಿಕ್ ಹೇಳಿದ್ದಾರೆ.