ಧಾರವಾಡ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶ ಇಲ್ಲ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇದು ನಿಮ್ಮ ಅಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ, ವಕ್ಫ್ ಬೋರ್ಡ್ದೂ ಅಲ್ಲ. ಇದು ಹಿಂದೂಗಳದ್ದೂ ಅಲ್ಲ, ಸರ್ಕಾರದ ಜಾಗ ಅದು. ಸರ್ಕಾರಿ ಜಾಗದಲ್ಲಿ ನೀವು ವರ್ಷಕ್ಕೆರಡು ಬಾರಿ ನಮಾಜ್ ಮಾಡುತ್ತಿದ್ದೀರಿ ಎಂದರು.
ಈದ್ಗಾ ಮೈದಾನ ವಕ್ಫ್ ಬೋರ್ಡ್ದೂ ಅಲ್ಲ, ಹಿಂದೂಗಳದ್ದು ಅಲ್ಲ: ಪ್ರಮೋದ್ ಮುತಾಲಿಕ್ - ಧಾರವಾಡ
ಈದ್ಗಾ ಮೈದಾನ ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ, ವಕ್ಫ್ ಬೋರ್ಡ್ದೂ ಅಲ್ಲ, ಹಿಂದೂಗಳದ್ದೂ ಅಲ್ಲ. ಅದು ಸರ್ಕಾರದ ಜಾಗ. ಹೀಗಿದ್ದಾಗ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ಎಂದು ಮುತಾಲಿಕ್ ಅವರು ಜಮೀರ್ ಅಹ್ಮದ್ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಮೋದ್ ಮುತಾಲಿಕ್
ಹೀಗಿದ್ದಾಗ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ?. ನೀವು ಕೇವಲ ಮುಸ್ಲಿಂ ವೋಟಿನ ಮೇಲೆ ಗೆದ್ದಿಲ್ಲ. ಮುಸ್ಲಿಂ ಎಂಎಲ್ಎ ಅಲ್ಲ, ನೀವು ಚಾಮರಾಜಪೇಟೆ ಶಾಸಕ. ನಿಮಗೆ ಹಿಂದೂಗಳು ವೋಟ್ ಹಾಕಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಿ, ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಅದನ್ನು ನೀವು ವಾಪಸ್ ಪಡೆಯಬೇಕು, ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ, ಆದ್ರೆ ಗಣೇಶ ಹಬ್ಬಕ್ಕಿಲ್ಲ ಅವಕಾಶ: ಶಾಸಕ ಜಮೀರ್
Last Updated : Aug 8, 2022, 9:19 PM IST