ಧಾರವಾಡ: ಹಿಜಾಬ್ ತೀರ್ಪಿನ ವಿರುದ್ಧ ಅಪೀಲು ಹೋಗಲು ಅವಕಾಶವಿದೆ. ಆದರೆ, ತೀರ್ಪಿನ ಕುರಿತು ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿಯ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹೋಗಿದ್ರು. ನಿನ್ನೆ ಕೋರ್ಟ್ ತೀರ್ಪು ಹೊರ ಬಿದ್ದಿದ್ದು, ಇದನ್ನು ಗೌರವಿಸದೇ ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ತೀರ್ಪಿನ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯ ಇರೋದೆ ಸಂವಿಧಾನದ ಆಧಾರದ ಮೇಲೆ. ಆದ್ರೆ, ಅತಾವುಲ್ಲಾ ಗುಂಜಲಕಟ್ಟಿ ಜಡ್ಜ್ ಮತ್ತು ನ್ಯಾಯಾಲಯದ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ, ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡಲಾಗುವುದು.