ಕರ್ನಾಟಕ

karnataka

ETV Bharat / state

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಅವಕಾಶ ಕೊಡದಿದ್ರೆ ಬಿಜೆಪಿ ವಿರುದ್ಧ ಮನೆ ಮನೆ ಪ್ರಚಾರ: ಮುತಾಲಿಕ್

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಡಳಿತ ಪಕ್ಷ ಅವಕಾಶ ಮಾಡಿಕೊಡದೇ ಹೋದರೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸುವುದಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುತಾಲಿಕ್​ ಎಚ್ಚರಿ ಕೊಟ್ಟರು.

Kn_hbl_01_mutalik_yacharike_avb_7208089
ಪ್ರಮೋದ್​ ಮುತಾಲಿಕ್

By

Published : Aug 26, 2022, 6:45 PM IST

ಹುಬ್ಬಳ್ಳಿ:ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಮತ್ತು ಸ್ಥಳೀಯ ಶಾಸಕರು ವಿರೋಧ ಹಾಗೂ ತೊಂದರೆ ಕೊಟ್ಟರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಗಣೇಶನ ಫೋಟೊ ಹಿಡಿದು ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಪ್ರಮೋದ್​ ಮುತಾಲಿಕ್

ನಗರದಲ್ಲಿಂದು ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ಅಗಸ್ಟ್ 29 ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿಯ ರಚನೆ ಅವಶ್ಯಕತೆ ಇರಲಿಲ್ಲ. ವಿನಾಕಾರಣ ಕಾಲಹರಣ ಮಾಡಲು ಈ ರೀತಿಯ ನಾಟಕವನ್ನು ಪಾಲಿಕೆ ಮಾಡುತ್ತಿದೆ ಎಂದರು.

ಪಾಲಿಕೆಯ ಮೇಯರ್ ಅನುಮತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ರಿಪೋರ್ಟ್ ಇರಬಾರದು ಎಂದು ಕಂಡಿಷನ್ ಹಾಕಲಾಗಿದೆ. ನಾವು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ವಿರೋಧ ಮಾಡಿಲ್ಲ. ಹಾಗೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಈವರೆಗೆ ಯಾರೂ ವಿರೋಧ ಮಾಡಿಲ್ಲ. ಹಾಗೇನಾದರೂ ಸೋಮವಾರ ಅನುಮತಿ ನೀಡಲು ಹಿಂದೆಟ್ಟು ಹಾಕಿದರೇ ಒತ್ತಾಯ ಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಈ ವೇಳೆ ಸರ್ಕಾರ 144 ಕಲಂ, ಲಾಠಿ ಚಾರ್ಜ್, ಗುಂಡೇಟು ಆದೇಶ ಹೊರಡಿಸಿದರೂ ನಮ್ಮ ಪಟ್ಟು ಬಿಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮುಂದುವರಿದ ಈದ್ಗಾ ಮೈದಾನ ಹೋರಾಟ.. ಹಿಂದೂಸ್ತಾನ್​ ಜನತಾ ಪಾರ್ಟಿಯಿಂದ ಪ್ರತಿಭಟನೆ

ABOUT THE AUTHOR

...view details