ಕರ್ನಾಟಕ

karnataka

ETV Bharat / state

ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಮುತಾಲಿಕ್​ರಿಂದ ರಾಮ ನಾಮ‌ ಜಪ - dharwad latest news

ಶ್ರೀರಾಮಸೇನಾ ಕಾರ್ಯಕರ್ತರೊಂದಿಗೆ ಪ್ರಮೋದ್​ ಮುತಾಲಿಕ್​ ಅವರು ರಾಮನ‌ ಜಪ ಮಾಡಿದರು. ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಂದು ದೇಶದ 130 ಕೋಟಿ ಜನರಿಗೆ ಹರ್ಷದ ದಿನವಾಗಿದೆ. 500 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮನ ಜನ್ಮ ಸ್ಥಾನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

pramod mutalik
ಮುತಾಲಿಕ ಅವರಿಂದ ರಾಮನಾಮ‌ ಜಪ

By

Published : Jun 10, 2020, 3:40 PM IST

ಧಾರವಾಡ: ರಾಮಮಂದಿರ ಶಿಲಾನ್ಯಾಸ ಹಿನ್ನೆಲೆ ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಸಾಧನಕೇರಿಯಲ್ಲಿರುವ ತಮ್ಮ‌ ನಿವಾಸದಲ್ಲಿ ಶ್ರೀರಾಮನ‌ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದರು.

ಶ್ರೀರಾಮಸೇನಾ ಕಾರ್ಯಕರ್ತರೊಂದಿಗೆ ರಾಮನ‌ ಜಪ ಮಾಡಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಂದು ದೇಶದ 130 ಕೋಟಿ ಜನರಿಗೆ ಹರ್ಷದ ದಿನವಾಗಿದೆ. 500 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮನ ಜನ್ಮ ಸ್ಥಾನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮುತಾಲಿಕ್​ ಅವರಿಂದ ರಾಮ ನಾಮ‌ ಜಪ

ರಾಮಜನ್ಮಭೂಮಿಗಾಗಿ 76 ಯುದ್ಧ ಹಾಗೂ 30 ಲಕ್ಷ ಜನರ ಬಲಿದಾನವಾಗಿದೆ. 500 ಬಾರಿ ಶ್ರೀರಾಮನ ಜಪ ಮಾಡುವ ಮೂಲಕ ಇಂದು ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಮುತಾಲಿಕ್​ ತಿಳಿಸಿದರು.

ABOUT THE AUTHOR

...view details