ಧಾರವಾಡ: ಲಾಕ್‌ಡೌನ್ ಮಧ್ಯೆಯೇ ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿದ್ದಾರೆ. ಇದನ್ನು ದೆಹಲಿ ಸರ್ಕಾರ ಏಕೆ ತಡೆಯಲಿಲ್ಲ? ಎಂದು ದೆಹಲಿಯ ತಬ್ಲಿಘಿ ಜಮಾತ್ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ತಬ್ಲಿಘಿ ಜಮಾತ್ ಸಭೆಗೆ ಉಗ್ರ ನಂಟು: ಮುತಾಲಿಕ್ ಆರೋಪ, ತನಿಖೆಗೆ ಆಗ್ರಹ
ದೆಹಲಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ಪ್ರವಾಸ ಪಾಸ್‌ಪೋರ್ಟ್‌ನಲ್ಲಿ ಬಂದವರು ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಕೆಲವು ಸಂಶಯಗಳು ಮೂಡುತ್ತಿವೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇವರಿಗೆ ತಬ್ಲಿಘಿ ಜಮಾತ್ ಭಯೋತ್ಪಾದನಾ ಸಂಘಟನೆ ಜೊತೆ ಲಿಂಕ್ ಇದ್ಯಾ, ಸಭೆ ಹಿಂದೆ ಕೊರೋನಾ ಹರಡಿಸುವ ಷಡ್ಯಂತ್ರ ಇತ್ತಾ? ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಆ ಸಭೆಯಲ್ಲಿದ್ದ 10 ಜನ ಕರೊನಾದಿಂದಲೇ ಸತ್ತಿದ್ದಾರೆ. ನಮ್ಮ ರಾಜ್ಯದ 300 ಜನ ಸಹ ಭಾಗಿಯಾಗಿದ್ದರು. ಅವರೆಲ್ಲ ಯಾರು? ಯಾಕೆ ಹೋಗಿದ್ದರು? ಎನ್ನುವುದನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.