ಕರ್ನಾಟಕ

karnataka

ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ: ಸಮಾಜ ಇದನ್ನು ಖಂಡಿಸುತ್ತಿದೆ ಎಂದ ಪ್ರಹ್ಲಾದ್ ಜೋಶಿ

By

Published : Aug 13, 2022, 3:30 PM IST

ಯುವತಿಯರ ಬಗ್ಗೆ ನಿನ್ನೆ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

central minister Pralhad Joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಧಾರವಾಡ: ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕಾದರೆ ಯುವಕರು ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕೆಂದು ಶುಕ್ರವಾರ ಶಾಸಕ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ನಾನು ಎರಡನೇ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ, ಸಮಾಜ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಒಂದು ಸಂಸ್ಕೃತಿ ಹೊಂದಿದೆ. ಅಕ್ಕ-ತಂಗಿ, ತಾಯಂದಿರ ಬಗ್ಗೆ ಶ್ರದ್ಧೆ ಇರುವ ದೇಶ ನಮ್ಮ ಭಾರತ. ಈ ಹೇಳಿಕೆ ಅತ್ಯಂತ ಖಂಡನೀಯ. ಯಾರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೋ ಅವರೇ ಇಡೀ ದೇಶದಲ್ಲಿ ಭ್ರಷ್ಟಾಚಾರದ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಮಾಡಿದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸರ್ಕಾರದಲ್ಲಿ 2ಜಿ, ಕಾಮನ್​ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಸೇರಿದಂತೆ ಸ್ಕ್ಯಾಮ್​ಗಳದ್ದೇ ಚರ್ಚೆ ಆಗುತ್ತಿತ್ತು. ಭಾರತ ದೇಶಕ್ಕೆ ಬರಲು ಜನರು ಬಳಿ ವೀಸಾಕ್ಕೂ ಹಣ ಪಡೆದಿದ್ದಾರೆ. ಇಂಥಹದ್ದೊಂದು ಅಯೋಗ್ಯ ಪಾರ್ಟಿ ಕಾಂಗ್ರೆಸ್ ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಅಂದ್ರೆ ನಗು ಬರುತ್ತೆ. ಪ್ರಿಯಾಂಕ್ ಖರ್ಗೆ ಅವರು ಕೊಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಯುವತಿಯರು ಉದ್ಯೋಗ ಬೇಕಾದ್ರೆ ಮಂಚ ಹತ್ತಬೇಕು: ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಪರೇಶ್ ಮಿಸ್ತಾ ಹತ್ಯೆ ಪ್ರಕರಣದ ಆರೋಪಿಯನ್ನು ವಕ್ಫ್ ಬೋರ್ಡ್​ಗೆ ನೇಮಿಸಿದ ಹಿನ್ನೆಲೆ ಈ ಹೆಸರು ಹೇಗೆ ಬಂತು ಅನ್ನೋದರ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಲು ನಾನು ಹೇಳಿದ್ದೇನೆ. ನಾನು ಶಶಿಕಲಾ ಜೊಲ್ಲೆ ಅವರಿಗೂ ಕರೆ ಮಾಡಿ ಹೇಳಿದ್ದೇನೆ. ಎಲ್ಲಿ ಲೋಪ ಆಗಿದೆ ಎಂಬುದರ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಿ ಅಂತಾ ತಿಳಿಸಿದ್ದೇನೆ ಎಂದರು.

ABOUT THE AUTHOR

...view details