ಧಾರವಾಡ :ಅಲ್ಪಸಂಖ್ಯಾತರ ಮತ ಪಡೆಯಲು ಆರ್ಎಸ್ಎಸ್ ಟೀಕೆ ಮಾಡುತ್ತಾರೆ. ನಾವು ಮುಸ್ಲಿಂ ವಿರೋಧಿ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರ್ಎಸ್ಎಸ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಸಮುದಾಯದ ವಿರೋಧವಾಗಿಯೂ ನಾವಿಲ್ಲ. ಆದರೆ, ಅವರು ಮುಗ್ಧ ಮುಸ್ಲಿಂರ ವೋಟ್ ಪಡೆಯಲು ಆರ್ಎಸ್ಎಸ್-ಬಿಜೆಪಿ ಬೈಯುತ್ತಾರೆ. ಬಿಜೆಪಿ, ಆರ್ಎಸ್ಎಸ್ ಅನ್ನು ಭೂತದಂತೆ ತೋರಿಸುತ್ತಿದ್ದಾರೆ. ಅದಕ್ಕಾಗಿಯೇ ಸಿದ್ದರಾಮಯ್ಯ, ಹೆಚ್ಡಿಕೆ ಸ್ಪರ್ಧೆಗೆ ಬಿದ್ದಿದ್ದಾರೆ. ಅವರ ಬೇರೆ ವೋಟ್ ಬ್ಯಾಂಕ್ ಎಲ್ಲ ಕಡಿಮೆ ಆಗುತ್ತಿದೆ ಎಂದರು.