ಕರ್ನಾಟಕ

karnataka

ETV Bharat / state

9 ಮಂದಿ ವಿರುದ್ಧ ಎನ್ಐಎ ಚಾರ್ಜ್​ಶೀಟ್ ಸಲ್ಲಿಕೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದೇನು? - ಐಸಿಸ್ ಸಂಚು ಪ್ರಕರಣ

ದೇಶದ ರಾಷ್ಟ್ರೀಯ ಭದ್ರತೆ, ಏಕತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ಶಿವಮೊಗ್ಗದಲ್ಲಿ ನಡೆದ ಪ್ರಾಯೋಗಿಕ ಐಇಡಿ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು 9 ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯಿಸಿದರು.

pralhad joshi
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

By

Published : Jul 2, 2023, 12:02 PM IST

ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಧಾರವಾಡ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಐಸಿಸ್ (ISIS) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಬಾಂಬ್ ಅಂಶದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿದರು.

ಶಿವಮೊಗ್ಗ, ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಬಗ್ಗೆ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಇದರಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಎನ್‌ಐಎ ಬಹಳ ಕಟ್ಟುನಿಟ್ಟಾಗಿ ತನಿಖಾ ಕೆಲಸ ಮಾಡುತ್ತದೆ. ಆದರೆ, "ಅದೊಂದು ಮಹತ್ವದ ವಿಷಯವೇ ಅಲ್ಲ, ಡೈವರ್ಟ್ ಮಾಡೋಕೆ ಹೀಗೆ ಮಾಡಿದ್ದಾರೆ" ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಈಗ ಇದಕ್ಕೆಲ್ಲ ಉತ್ತರ ಕೊಡಬೇಕು. ಭಯೋತ್ಪಾದಕರು, ಭಯೋತ್ಪಾದಕ ಕೃತ್ಯಗಳಿಗೆ ಕಾಂಗ್ರೆಸ್ ಯಾವಾಗಲೂ ಸಿಂಪಥಿ ತೋರುತ್ತದೆ. ಈಗ ಮಾಧ್ಯಮಗಳು ಅಂದಿನ ಹೇಳಿಕೆ ತೋರಿಸಿ, ಡಿಕೆಶಿ ಅವರು ಏನು ಹೇಳ್ತಾರೆ ಕೇಳಿ ನೋಡಿ ಎಂದರು.

ಎನ್ಐಎ ಚಾರ್ಜ್​ಶೀಟ್​ನಲ್ಲೇನಿದೆ? :ದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ನಡೆಸಲು ಹಾಗೂ ಭಾರತದ ವಿರುದ್ಧ ಯುದ್ಧ ನಡೆಸಲು ISIS ಪಿತೂರಿಯ ಭಾಗವಾಗಿ ಆರೋಪಿಗಳು ಶಿವಮೊಗ್ಗದಲ್ಲಿ ಪ್ರಾಯೋಗಿಕ ಐಇಡಿ ಸ್ಫೋಟ ನಡೆಸಿದ್ದಾರೆ. ಅನೇಕ ಸ್ಥಳಗಳಲ್ಲಿ ಪ್ರಯೋಗ ನಡೆಸುವುದು ಮತ್ತು ಜನರಲ್ಲಿ ಭಯ ಹುಟ್ಟಿಸಲು ಆಸ್ತಿ, ವಾಹನಗಳಿಗೆ ಬೆಂಕಿ ಹಚ್ಚುವಲ್ಲಿ ತೊಡಗಿದ್ದರು ಎಂದು ಎನ್ಐಎ ಚಾರ್ಜ್‌ಶೀಟ್​ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ :ಐಸಿಸ್, ತಾಲಿಬಾನ್​ಗೆ​ ಬೆಂಬಲ ಕೊಡುತ್ತೀರಾ, ರಾಜ್ಯದ ಜನರಲ್ಲಿ ಕ್ಷಮೆ ಕೇಳ್ತೀರಾ : ಡಿಕೆಶಿಗೆ ಜೋಷಿ ಪ್ರಶ್ನೆ

ದೋಷಾರೋಪ ಪಟ್ಟಿಯಲ್ಲಿರುವ ಆರೋಪಿಗಳು : ಮೊಹಮ್ಮದ್ ಶಾರಿಕ್, ಸೈಯದ್ ಯಾಸಿನ್, ಮಾಜ್ ಮುನೀರ್ ಅಹಮದ್, ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್, ಹುಜೈರ್ ಫರ್ಹಾನ್ ಬೇಗ್, ನದೀಮ್ ಅಹ್ಮದ್ ಕೆ.ಎ, ಜಬೀವುಲ್ಲಾ ಹಾಗೂ ನದೀಮ್ ಫೈಜಲ್ ಎನ್ ಹೆಸರು ದೋಷಾರೋಪ ಪಟ್ಟಿಯಲ್ಲಿದೆ. ಯುಎ (ಪಿ) ಆಕ್ಟ್ 1967, ಐಪಿಸಿ ಮತ್ತು ಕೆಎಸ್ ಪ್ರಿವೆನ್ಶನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್​ ಲಾಸ್ ಆಫ್ ಪ್ರಾಪರ್ಟಿ ಆ್ಯಕ್ಟ್ 1981 ರ ಅಡಿಯಲ್ಲಿ ಈ 9 ಮಂದಿ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಎನ್​ಐಎ ಹೇಳಿದೆ.

ಎನ್‌ಐಎ ನೀಡಿದ ಮಾಹಿತಿ ಪ್ರಕಾರ, ಆನ್‌ಲೈನ್ ಹ್ಯಾಂಡ್ಲರ್​ಗಳು ಕ್ರಿಪ್ಟೋ ಕರೆನ್ಸಿಗಳ ಮೂಲಕ ಆರೋಪಿಗಳಿಗೆ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್​ 19ರಂದು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ಎನ್​ಐಎ ವಹಿಸಿಕೊಂಡಿತ್ತು. ಬಳಿಕ, ನವೆಂಬರ್ 15, 2022 ರಂದು ಮರು ನೋಂದಣಿ ಮಾಡಿತ್ತು.

ಇದನ್ನೂ ಓದಿ :NIA: ಶಿವಮೊಗ್ಗ ಐಸಿಸ್ ಸಂಚು ಪ್ರಕರಣ : 9 ಆರೋಪಿಗಳ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಎನ್​ಐಎ

ABOUT THE AUTHOR

...view details