ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿಯವರದ್ದು ಬೇಜವಾಬ್ದಾರಿತನದ ಹೇಳಿಕೆ: ಪ್ರಹ್ಲಾದ ಜೋಶಿ - ಪ್ರಹ್ಲಾದ ಜೋಶಿ

ಮಂಗಳೂರಲ್ಲಿ ಬಾಂಬ್ ಪತ್ತೆ ವಿಚಾರವಾಗಿ ಮಾತನಾಡಿರುವ ಕುಮಾರಸ್ವಾಮಿಯವರದ್ದು ಬೇಜವಾಬ್ದಾರಿತನದ ಹೇಳಿಕೆ. ಇದೊಂದು ನಾಲಾಯಕತನದ ಪರಮಾವಧಿ. ಕುಮಾರಸ್ವಾಮಿಗೆ ಯಾರು ಬಾಂಬ್ ಇಟ್ಟಿದ್ದಾರೆ ಎನ್ನುವುದು ಗೊತ್ತಿದೆ ಅಂದ ಮೇಲೆ ದೂರು ದಾಖಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Pralhad Joshi
ಪ್ರಹ್ಲಾದ ಜೋಶಿ

By

Published : Jan 21, 2020, 3:08 PM IST

Updated : Jan 21, 2020, 3:29 PM IST

ಧಾರವಾಡ:ಮಂಗಳೂರು ಬಜಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಇದೊಂದು ಆತಂಕಕಾರಿ ವಿಷಯವಾಗಿದ್ದು,ಇದರ ಬಗ್ಗೆ ಎಲ್ಲ ರೀತಿಯ ತನಿಖೆಯನ್ನು ಮಾಡಲಾಗುತ್ತದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರ ಬಾಂಬ್ ಪ್ರಕರಣದಲ್ಲಿ ಭಾಗಿಯಾದವರು. ದೇಶ ವಿರೋಧಿಗಳು, ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಗಲಭೆಯಲ್ಲಿಯೂ ಪ್ರಯತ್ನ ಮಾಡಿದ್ದರು ಎಂದರು‌.

ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡವರ ಪ್ರೇರಣೆಯಿಂದಲೇ ಇದು ಆಗಿರುವ ಸಾಧ್ಯತೆಯಿದೆ ಎಂದ ಅವರು, ತೀವ್ರವಾಗಿ ತನಿಖೆಯಾಗಬೇಕು, ತಪ್ಪಿತಸ್ಥರನ್ನ ಬಂಧಿಸಬೇಕು ಎಂದು ಅವರು ಸೂಚನೆ ನೀಡಿದರು. ರಾಜ್ಯದ ಎಲ್ಲಾ ವಿಮಾನ ಹಾಗೂ ರೈಲ್ವೆ ನಿಲ್ದಾಣಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಹೇಳಿದರು.

Last Updated : Jan 21, 2020, 3:29 PM IST

ABOUT THE AUTHOR

...view details