ಕರ್ನಾಟಕ

karnataka

ETV Bharat / state

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿರೋಧಕ್ಕೆ ಕಾಂಗ್ರೆಸ್​ ಕುಮ್ಮಕ್ಕಿದೆ: ಪ್ರಹ್ಲಾದ್ ಜೋಶಿ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಹೋದವರ​ ಹಿಂದೆ ಕಾಂಗ್ರೆಸ್​ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಆರೋಪಿಸಿದ್ದಾರೆ.

Kn_hbl_04_joshi_ganesh_avb_7208089
ಪ್ರಹ್ಲಾದ್ ಜೋಶಿ

By

Published : Aug 31, 2022, 5:51 PM IST

Updated : Aug 31, 2022, 6:01 PM IST

ಹುಬ್ಬಳ್ಳಿ:ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆ ಅಂಜುಮನ್ ಇಸ್ಲಾಂ ಸಂಸ್ಥೆ ಮತ್ತು ಕೆಲವರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಇದರ ಹಿಂದೆ ಕಾಂಗ್ರೆಸ್​ ಪಕ್ಷದ ಕುಮ್ಮಕ್ಕಿದೆ. ಕೆಲವು ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ನಗರದ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದುಕೊಂಡು ಮಾತನಾಡಿದ ಅವರು, ಇದು ಪಾಲಿಕೆ ಮೈದಾನ ಅಂತಾ ತೀರ್ಮಾನ ಆಗಿದೆ. ಈಗಾಗಲೇ ಗಣೇಶ ಪ್ರತಿಷ್ಠಾಪನೆ ಆಗಿದೆ. ಈ ವಿಚಾರಕ್ಕೆ ರಾಜಕೀಯ ಪಕ್ಷಗಳು ವಿರೋಧ ಮಾಡಿದ್ದೇ ತಪ್ಪು. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ನೀತಿ ಬಿಡಬೇಕು. ದೇಶಾದ್ಯಂತ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಲ್ಲರಿಗೂ ಗೊತ್ತಿದೆ ಎಂದರು.

ಹುಬ್ಬಳ್ಳಿಯ ಈದ್ಗಾದಲ್ಲಿ ಗಣೇಶೋತ್ಸವ

ಕಾಂಗ್ರೆಸ್​ಗೆ ಇಂತಹ ಸ್ಥಿತಿ ಕರ್ನಾಟಕದಲ್ಲಿಯೂ ಬರುತ್ತೆ. ಕಾಂಗ್ರೆಸ್ ಪಕ್ಷ ಎಲ್ಲ ವಿಷಯಕ್ಕೂ ಕಲ್ಲು ಹಾಕುತ್ತಿದೆ. ಇದು ಸರಿಯಲ್ಲ, ಅವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ, ಇದೆಲ್ಲ ಆಗುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಸಚಿವ ಜೋಶಿ ಹರಿಹಾಯ್ದರು.

ಇದನ್ನೂ ಓದಿ:ಹುಬ್ಬಳ್ಳಿ: ಗಣೇಶ ಪೂಜೆಯ ವೇಳೆ ಸಾವರ್ಕರ್ ಫೋಟೋ ಪ್ರದರ್ಶಿಸಿದ ಮುತಾಲಿಕ್‌

Last Updated : Aug 31, 2022, 6:01 PM IST

ABOUT THE AUTHOR

...view details