ಹುಬ್ಬಳ್ಳಿ:ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ. ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿದ್ದಾರೆ. ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರಿದರು. ಇಂದು ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಒಂದನೇ ಸಂಪುಟದಲ್ಲಿ ಭರವಸೆ ಈಡೇರಿಸಲಾಗುವುದು ಎಂದಿದ್ದರು. ಆದರೆ ಈಗ ಏನು ಹೇಳುತ್ತಿದ್ದೀರಿ?. ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ. ಇದೇನಾ ಜನರಿಗೆ ನೀಡಿದ ಭರವಸೆ ಈಡೇರಿಸುವುದು?. ಇನ್ ಪ್ರಿನ್ಸಿಪಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ಕುರಿತು ಸಹ ತನಿಖೆ ಮಾಡಲಿ. ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಎಷ್ಟು ಅಂತಾ ಈಗಾಗಲೇ ತಿಳಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ. 2009 ರಿಂದ 2014 ರವರೆಗೆ ಡೆವೆಲೇಶನ್ ಫಂಡ್ 148 ಶೇಕಡಾವಾರು ಜಾಸ್ತಿಯಾಗಿದೆ ಎಂದರು.
ಇದನ್ನೂ ಓದಿ:ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸತ್ಯ; ಎಷ್ಟು ಪರ್ಸೆಂಟು ಅಂತ ಹೇಳಲ್ಲ- ಶೆಟ್ಟರ್
2014 ರಿಂದ 2019 ರವರೆಗೆ ಡೆವಲೇಶನ್ ಫಂಡ್ 129 ಜಾಸ್ತಿಯಾಗಿದೆ. 700, 800 ಕೋಟಿ ರಷ್ಟು ಬರುತಿದ್ದ ಡೆವೆಲೆನ್ ಅನುದಾನ 5000, 7000 ಕೋಟಿ ಬಂದಿದೆ. ಸಿದ್ದರಾಮಯ್ಯ ಆರೋಪ ಮಾಡುವ ಮೊದಲು ತಿಳಿದುಕೊಳ್ಳಲಿ. ಉದಾಹರಣೆಗೆ 2009-10 ರಲ್ಲಿ 20476 ಕೋಟಿ ರೂಪಾಯಿ ಬರುತಿದ್ದರೆ 2019-20 ರಲ್ಲಿ 7578 ಕೋಟಿ ಬಂದಿದೆ. 2021-22ರಲ್ಲಿ 7862 ಕೋಟಿ ಬಂದಿದೆ. ಪ್ರತಿ ವರ್ಷ ರಾಜ್ಯಕ್ಕೆ ಅನುದಾನ ಹೆಚ್ಚಾಗುತ್ತಲೇ ಇದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.