ಹುಬ್ಬಳ್ಳಿ:13 ಬಜೆಟ್ ಮಂಡಿಸಿದ, ಒಮ್ಮೆ ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯರನ್ನು ಈ ಬಾರಿ 100 ಪರ್ಸೆಂಟ್ ಮನೆಗೆ ಕಳಿಸುತ್ತೇವೆ. ನೀವು ಬದಾಮಿಯಲ್ಲಿ ಕೆಲಸ ಮಾಡಿಲ್ಲ. ಹಾಗಾಗಿ ಕೋಲಾರಕ್ಕೆ ಹೋಗುತ್ತಿದ್ದೀರಿ. ನಾವು ಅಚ್ಚರಿ ಅಭ್ಯರ್ಥಿ ಹಾಕಲ್ಲ, ಅಲ್ಲಿದ್ದವರನ್ನೇ ಅಭ್ಯರ್ಥಿ ಮಾಡುತ್ತೇವೆ. ಸಿದ್ದರಾಮಯ್ಯರನ್ನು ಈ ಬಾರಿ ಮನೆಗೆ ಕಳಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹುಬ್ಬಳ್ಳಿ, ಕಲಬುರಗಿ, ಯಾದಗಿರಿ ಕಾರ್ಯಕ್ರಮ ನೋಡಿ ಸಿದ್ದರಾಮಯ್ಯ ಗಾಬರಿ ಆಗಿದ್ದಾರೆ. ಸಿದ್ದರಾಮಯ್ಯ ಮೊದಲು ಡಿ ಕೆ ಶಿವಕುಮಾರ್ ಜೊತೆ ಸೆಟಲ್ ಮಾಡಿಕೊಳ್ಳಲಿ. ಬದಾಮಿ ದೂರ ಇದೆ ಅನ್ನೋ ಕಾರಣ ಅಲ್ಲ, ನೀವು ಜನರೊಂದಿಗೆ ಸಂಪರ್ಕ ಇಲ್ಲ. ನನಗೂ ದೆಹಲಿ ದೂರ, ಆದರೂ ನಾನು ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಬದಾಮಿಯಲ್ಲಿ ಸೋಲಿನ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲೂ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.
ದೇಶದ ಬಹುತೇಕ ರಾಜ್ಯದಲ್ಲಿ ಜನರು ಕಾಂಗ್ರೆಸ್ ಧ್ವನಿ ಅಡಿಗಿಸಿದ್ದು, ಈಗ ಅವರು ಪ್ರಜಾಧ್ವನಿ ಎಂದು ತಮ್ಮದೆ ಧ್ವನಿ ನಡೆಸುತ್ತಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಸೇರಿ ದೇಶದಲ್ಲಿ ಒಂದೆರಡು ರಾಜ್ಯಗಳು ಬಿಟ್ಟರೆ ಎಲ್ಲ ಕಡೆ ಜನರು ಕಾಂಗ್ರೆಸ್ ಧ್ವನಿ ಅಡಿಗಿದೆ. ಬರುವ ವರ್ಷ ರಾಜಸ್ಥಾನ ಹಾಗೂ ಚತ್ತೀಸಗಡ್ನಲ್ಲಿಯೂ ಕಾಂಗ್ರೆಸ್ಗೆ ಸೋಲನುಭವಿಸಲಿದೆ ಎಂದರು.
ಹಣ ಪಡೆದೇ ವಿದ್ಯುತ್ ನೀಡದವರು ಉಚಿತ ಕೊಡ್ತರಾ?:200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇನೆ ಎನ್ನುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಹಣ ಪಡೆದು ವಿದ್ಯುತ್ ನೀಡಲು ಇವರಿಂದ ಆಗಿಲ್ಲ. ಪ್ರಧಾನಿ ಮೋದಿ ಬರುವರೆಗೆ ದೇಶ ವಿದ್ಯುತ್ ಕೊರತೆ ಅನುಭವಿಸುತ್ತಿತ್ತು. ಈಗ ಎಲ್ಲಿಯೂ ಸಹ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಕಾಂಗ್ರೆಸ್ ಅವರು ಅಧಿಕಾರದಲ್ಲಿರುವರೆಗೆ ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಮತಕ್ಕಾಗಿ ಸುಳ್ಳು ಹೇಳಿ ಜೀವನ ಮಾಡುತ್ತಿದ್ದಾರೆ. ನಾ ನಾಯಕಿ ಎಂದು ರಾಜ್ಯಕ್ಕೆ ಬಂದ ಹೋದ ನಕಲಿ ಗಾಂಧಿ ಕುಡಿಗಳು ರಾಜಸ್ಥಾನದಲ್ಲಿ ಅವರ ಸಹೋದರ ಹೇಳಿದ್ದು ಯಾಕೆ ಮಾಡಿಲ್ಲ ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.