ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಮಾನವೀಯತೆಯಿಂದ ಸ್ಪಂದಿಸಿ ನೆರವು ನೀಡಿ; ಪ್ರಹ್ಲಾದ್ ಜೋಶಿ - ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟಕ್ಕೆ ತುತ್ತಾದ ಪ್ರದೇಶಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಲವು ಜನರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬಡಜನರ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೊಗಿವೆ. ಜನರಿಗೆ ಸರ್ಕಾರದ ನೆರವು ಹಾಗೂ ಸ್ಪಂದನೆ ಬೇಕಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಸಂತ್ರಸ್ತರೊಂದಿಗೆ ಮಾನವೀಯತೆಯಿಂದ ಸ್ಪಂದಿಸಿ ನೆರವು ನೀಡಿ ಎಂದು ಎಂದು ಹೇಳಿದರು.

ನೆರೆ ಸಂತ್ರಸ್ಥರೊಂದಿಗೆ ಮಾನವೀಯತೆಯಿಂದ ಸ್ಪಂದಿಸಿ ನೆರವು ನೀಡಿ;ಪ್ರಹ್ಲಾದ್ ಜೋಶಿ

By

Published : Aug 10, 2019, 12:07 AM IST

ಹುಬ್ಬಳ್ಳಿ;ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಲವು ಜನರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬಡಜನರ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೊಗಿವೆ. ಜನರಿಗೆ ಸರ್ಕಾರದ ನೆರವು ಹಾಗೂ ಸ್ಪಂದನೆ ಬೇಕಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಸಂತ್ರಸ್ತರೊಂದಿಗೆ ಮಾನವೀಯತೆಯಿಂದ ಸ್ಪಂದಿಸಿ ನೆರವು ನೀಡಿ ಎಂದು ಎಂದು ಹೇಳಿದರು.

ನೆರೆ ಸಂತ್ರಸ್ಥರೊಂದಿಗೆ ಮಾನವೀಯತೆಯಿಂದ ಸ್ಪಂದಿಸಿ ನೆರವು ನೀಡಿ;ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ನಲ್ಲಿ ನೆರೆ ಪರಿಹಾರ ಕಾಮಗಾರಿಗಳ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆಯಿಂದ ಉಂಟಾದ ಹಾನಿ ಬಗ್ಗೆ ಸರಿಯಾದ ಮಾಹಿತಿ ಪಡೆದು ಅಂದಾಜು ಹಾನಿ ವೆಚ್ಚವನ್ನು ಶೀಘ್ರವಾಗಿ ತಯಾರಿಸಿ, ಕಂದಾಯ ಇಲಾಖೆ ವತಿಯಿಂದ ಭಾಗಶಃ ಮನೆ ಹಾನಿಯಾದವರಿಗೆ ನೀಡುವ ಪರಿಹಾರದ ಧನ ಹೆಚ್ಚಳಕ್ಕೆ ಆದ್ಯತೆ ನೀಡಿ ಎಂದರು.

ಹುಬ್ಬಳ್ಳಿಯಲ್ಲಿ ರಾಜಕಾಲುವೆ ಸೇರಿದಂತೆ ಹಲವು ರಸ್ತೆಗಳಲ್ಲಿ ಅನಧಿಕೃತ ಕಟ್ಟಗಳ ನಿರ್ಮಾಣ, ಒತ್ತುವರಿ ಕಂಡುಬಂದಿದೆ. ಇಂತಹ ಕಟ್ಟಗಳ ತೆರವಿಗೆ ಪಾಲಿಕೆ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆ ಸಂಚಾರಿ ವೈದ್ಯಕೀಯ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಿ, ಹಳ್ಳಿಗಳ ನೆರವಿಗೆ ಧಾವಿಸಬೇಕು. ಸಂತ್ರಸ್ತರ ಸಲುವಾಗಿ ಸ್ಥಾಪಿಸಿರುವ ಸಹಾಯವಾಣಿಗಳ ಕುರಿತಾಗಿ ಜಾಹೀರಾತು ನೀಡಿ ಪ್ರಚಾರ ಪಡಿಸಿ ಎಂದಿದ್ದಾರೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ, ಬಸವರಾಜ್ ಬೊಮ್ಮಾಯಿ, ನಿಂಬಣ್ಣನವರ್, ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ABOUT THE AUTHOR

...view details