ಕರ್ನಾಟಕ

karnataka

ETV Bharat / state

ಜಾತಿ ಆಧಾರದ ಮೇಲೆ ಯಾವ ಚುನಾವಣೆಗಳು ನಡೆಯುವುದಿಲ್ಲ: ಪ್ರಹ್ಲಾದ್​​ ಜೋಶಿ - ಪ್ರಹ್ಲಾದ್ ಜೋಶಿ

ಈ ಹಿಂದೆ ಪ್ರತ್ಯೇಕ‌ ಧರ್ಮ‌ ಮಾಡುತ್ತೇವೆ ಅಂದವರು ಅವರೇ. ಈಗ ಇಲ್ಲವೆಂದು ಹೇಳುತ್ತಿರುವವರು ಅವರೇ. ಲಿಂಗಾಯತ ಪ್ರತ್ಯೇಕ ಧರ್ಮದ ಮುಖಂಡರಲ್ಲಿ ಸ್ಪಷ್ಟತೆ ಇರಬೇಕಾಗುತ್ತೆ. ಆ ಸಮಾಜ ಮುಖಂಡರು, ನಮ್ಮ ಪಕ್ಷದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಪ್ರಹ್ಲಾದ್ ಜೋಶಿ

By

Published : Apr 13, 2019, 7:55 PM IST

ಹುಬ್ಬಳ್ಳಿ:ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಾನು ಏನನ್ನು ಹೇಳುವ ಅವಶ್ಯಕತೆ ಇಲ್ಲ. ಇದಕ್ಕೆ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಪ್ರತ್ಯೇಕ‌ ಧರ್ಮ‌ ಮಾಡುತ್ತೇವೆ ಅಂದವರು ಅವರೇ. ಈಗ ಇಲ್ಲವೆಂದು ಹೇಳುತ್ತಿರುವವರು ಅವರೇ. ಲಿಂಗಾಯತ ಪ್ರತ್ಯೇಕ ಧರ್ಮದ ಮುಖಂಡರಲ್ಲಿ ಸ್ಪಷ್ಟತೆ ಇರಬೇಕಾಗುತ್ತೆ. ಆ ಸಮಾಜದ ಮುಖಂಡರು, ನಮ್ಮ ಪಕ್ಷದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಪ್ರಹ್ಲಾದ್ ಜೋಶಿ

ಜಾತಿ ಆಧಾರದ ಮೇಲೆ ಯಾವ ಚುನಾವಣೆಗಳು ನಡೆಯುವುದಿಲ್ಲ. ಲೋಕಸಭಾ ಚುನಾವಣೆಯು ಜಾತಿ ಮೇಲೆ ನಡೆಯುವುದಿಲ್ಲ. ಇಲ್ಲಿನ ಜನತೆ ಅಭಿವೃದ್ಧಿ, ಸಭ್ಯತೆ ಹಾಗೂ ಸುಸಂಸ್ಕೃತರನ್ನು ನೋಡಿ ಮತ ಹಾಕುತ್ತಾರೆ. ಧಾರವಾಡ ಕ್ಷೇತ್ರದಲ್ಲಿ ಸುಸಂಸ್ಕೃತರಿಗೆ ಮತ ನೀಡುತ್ತಾರೆ. ಅವರಿಗೆ ಯಾರು ಸಭ್ಯರು ಎನ್ನುವುದು ಗೊತ್ತಿದೆ ಎಂದು ಪರೋಕ್ಷವಾಗಿ ವಿನಯ್ ಕುಲಕರ್ಣಿಗೆ ಟಾಂಗ್ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನನ್ನ ಹೊಗಳಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ.‌‌ ಇದು ಪತ್ರಿಕೆಯ ತುಣುಕುಗಳಲ್ಲಿ ಹರಿದಾಡುತ್ತಿದೆ. ಅವರು ನನ್ನ ಹೊಗಳಿದ್ದು ಎಷ್ಟು ಸತ್ಯ, ಎಷ್ಟು ಸುಳ್ಳು ನಮಗೆ ಗೊತ್ತಿಲ್ಲ ಎಂದರು.

ABOUT THE AUTHOR

...view details