ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಡಿಕೆಶಿ ಮೇಲೆ ನೇರವಾಗಿ ಹರಿಹಾಯ್ದಿದ್ದಾರೆ.
ಮಿಸ್ಟರ್ ಶಿವಕುಮಾರ್ ನಿಮ್ಮ ಗೂಂಡಾ ವರ್ತನೆ ಆಟ ನಡೆಯೋಲ್ಲ: ಜೋಶಿ ವಾರ್ನ್! - ಡಿ.ಕೆ.ಶಿವಕುಮಾರ್
ಭ್ರಷ್ಟಾಚಾರ ಆರೋಪದ ಮೇಲೆ ಜೈಲಿನಿಂದ ಬೇಲ್ ಪಡೆದು ಡಿ.ಕೆ.ಶಿವಕುಮಾರ್ ಹೊರಗಡೆ ಬಂದಿದ್ದಾರೆ. ಅದನ್ನು ನೆನಪು ಮಾಡಿಕೊಳ್ಳಬೇಕು...
ನಗರದಲ್ಲಿಂದು ಡಿಕೆಶಿಯ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂಬ ವಿಷಯವಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪದ ಮೇಲೆ ಜೈಲಿನಿಂದ ಬೇಲ್ ಪಡೆದು ಡಿ.ಕೆ.ಶಿವಕುಮಾರ್ ಹೊರಗಡೆ ಬಂದಿದ್ದಾರೆ. ಅದನ್ನು ನೆನಪು ಮಾಡಿಕೊಳ್ಳಬೇಕು. ಈಗಾಗಲೇ ಗೂಂಡಾವರ್ತನೆ, ರಾಜಕೀಯ ಕುತಂತ್ರದಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ. ಒಬ್ಬ ದಕ್ಷ ಪೊಲೀಸ್ ಆಯುಕ್ತರ ಮೇಲೆ ಅವಾಜ್ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಹರಿಹಾಯ್ದಿದ್ದಾರೆ.
ಏನು ಮಾಡಲು ಹೊರಟ್ಟೀರಿ ನೀವು, ಇದೆಲ್ಲ ದೇಶದಲ್ಲಿ ನಡೆಯೋದಿಲ್ಲ , ಬೇಲ್ ಪಡೆದು ಹೊರಗಡೆ ಇದ್ದೀರಿ ಅದನ್ನು ಅರಿತುಕೊಳ್ಳಿ ಎಂದು ಟಾಂಗ್ ಕೊಟ್ಟರು. ನಿಮ್ಮ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ತು, ಭ್ರಷ್ಟಾಚಾರ ಅನ್ನೋದನ್ನು ನೆನಪಿಟ್ಟುಕೊಂಡು ಆಫೀಸರ್‌ಗೆ ಧಮ್ಕಿ ಹಾಕಿ ಎಂದು ಕಿಡಿ ಕಾರಿದರು.