ಹುಬ್ಬಳ್ಳಿ : ಕಳ್ಳತನವಾಗಿದ್ದ ಒಂದು ಕೋಟಿ ಮೌಲ್ಯದ ಮೊಬೈಲ್ ಫೋನ್ಗಳನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಾರಸುದಾರರಿಗೆ ವಾಪಸ್ ಕೊಡಿಸಿರುವ ಪೊಲೀಸರ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕಾರ್ಯವನ್ನು ಜೋಶಿ ತಮ್ಮ ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ಸಮಾಜಕ್ಕೆ ಪೊಲೀಸರ ಇಂಥ ಕಾರ್ಯ ಅಗತ್ಯವಾಗಿದೆ ಎಂದಿದ್ದಾರೆ. ಮೊಬೈಲ್ ಕಳೆದುಕೊಂಡವರು ಇ - ಸ್ಪಂದನ ಹಾಗೂ ಸಿಐಇಆರ್ ಮೂಲಕ ದೂರು ಸಲ್ಲಿಸಿದ್ದರು. ಅವಳಿ ನಗರದ ಡಿ ಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರ ಸಮ್ಮುಖದಲ್ಲಿ ವಾರಸುದಾರರು ಕಳೆದುಹೋದ ಫೋನ್ಗಳನ್ನು ಪಡೆದುಕೊಂಡರು.
ಇ ಸ್ಪಂದನದ ಮೂಲಕ ದೂರು ಸಲ್ಲಿಸಿ: ಸಿಇಐಆರ್ ಕೇಂದ್ರ ದೂರಸಂಪರ್ಕ ಇಲಾಖೆಯ ಒಂದು ಯೋಜನೆಯಾಗಿದ್ದು, ಕಳೆದು ಹೋದ ಮೊಬೈಲ್ನ ಐಎಂಇಐ ಸಂಖ್ಯೆಯ ಸಹಾಯದಿಂದ ಅದನ್ನು ಪತ್ತೆ ಮಾಡಬಹುದಾಗಿದೆ. ಇ - ಸ್ಪಂದನದ ಮೂಲಕ ಸಾರ್ವಜನಿಕರು ತಮ್ಮ ದೂರು ಸಲ್ಲಿಸಬಹುದಾಗಿದ್ದು, ಶೀಘ್ರದಲ್ಲಿ ಅವುಗಳಿಗೆ ಸಮಾಧಾನ ಒದಗಿಸುವ ವ್ಯವಸ್ಥೆ ತರಲಾಗಿದೆ.
ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಿದ ಅವಳಿ ನಗರದ ಪೊಲೀಸರಿಗೆ ಅಭಿನಂದನೆ ಹೇಳಿರುವ ಜೋಶಿ, ಮೊಬೈಲ್ ಕಳೆದುಕೊಂಡ ಜನರು ಇ ಸ್ಪಂದನದ ಮೂಲಕ ದೂರು ಸಲ್ಲಿಸುವಂತೆ ಕರೆ ನೀಡಿದ್ದಾರೆ. CEIR ceir.gov.in ,02-8277952828 ಈ ಸಂಖ್ಯೆಗೆ "Hi" ಕಳುಹಿಸಿ ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ.