ಹುಬ್ಬಳ್ಳಿ :ಹಿಜಾಬ್ ವಿಚಾರವಾಗಿ ಗಲಾಟೆಯೇ ಆಗಬಾರದಿತ್ತು. ವಸ್ತ್ರ ಸಂಹಿತೆಯಿದೆ. ಅದನ್ನ ಎಲ್ಲರೂ ಪಾಲನೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಪಟ್ಟಬದ್ದ ರಾಜಕೀಯ ಶಕ್ತಿಗಳು ಮಕ್ಕಳಿಗೆ ಕುಮ್ಮಕ್ಕು ನೀಡುತ್ತಿವೆ. ಭಾರತದಲ್ಲಿ ಒಂದು ಸಂಸ್ಕ್ರತಿ ಇದೆ. ಕಾಂಗ್ರೆಸ್ ಈ ವಿಚಾರದಲ್ಲಿ ಅದರ ನಿಲುವು ಸ್ಪಷ್ಟಪಡಿಸಲಿ.
ನಾವು ಬೇಕಾದ್ರೆ ಕೇಸರಿ ಶಾಲು ಹಾಕದಂತೆ ಹೇಳುತ್ತೇವೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ. ನೀವು ಮುಸ್ಲಿಂ ಮಕ್ಕಳಿಗೆ ಹಿಜಾಬ್ ಧರಿಸಿ ಬನ್ನಿ ಅಂತಾ ಕರೆ ಕೊಡ್ತಿರಾ? ಎಂದು ಕಾಂಗ್ರೆಸ್ಗೆ ಸವಾಲು ಹಾಕಿದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿರುವುದು.. ನ್ಯಾಯಾಲಯದ ತೀರ್ಪು ಒಪ್ಕೋಬೇಕು. ಸರ್ಕಾರ ಜಾಣ್ಮೆಯಿಂದ ಕರ್ತವ್ಯ ನಿರ್ವಹಿಸಿದೆ. ಸಂಯಮದಿಂದ ನಿರ್ವಹಿಸಿದ್ದೇ ಅಶಕ್ತತೆ ಅಂದುಕೊಳ್ಳಬಾರದು. ಕೋಟ್೯ ಆದೇಶ ಪಾಲನೆ ಮಾಡಲ್ಲ ಅಂದ್ರೆ ನಮ್ಮ ಸಂವಿಧಾನದ ಹೊರತು ಇದ್ದೀರಾ? ಕೋಮುಭಾವನೆ, ತುಷ್ಟೀಕರಣ ಜಾಸ್ತಿಯಾಗಿದ್ದಕ್ಕೆ ಪಾಕಿಸ್ತಾನ ನಿರ್ಮಾಣವಾಯಿತು.
ಜಮೀರ್ ಅವರ ಹೇಳಿಕೆ, ಅವರ ಮಾನಸಿಕತೆ ತೋರಿಸುತ್ತದೆ. ಜಮೀರ್ ಹೇಳಿಕೆ ಚಿಲ್ಲರೆ ಹೇಳಿಕೆ. ಅದು ಅತ್ಯಂತ ಕೀಳು ಮಟ್ಟದ ಹೇಳಿಕೆ. ಒಬ್ಬ ಶಾಸಕನಾಗಿ ಕೀಳು ಮಟ್ಟದ ಹೇಳಿಕೆ ನೀಡಬಾರದು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ. ಹಿಜಾಬ್ ವಿವಾದದಲ್ಲಿ ಯಾರೇ ಪ್ರತಿಭಟನೆ ಮಾಡಿದ್ರು ಬಂಧಿಸಿಲಿ. ಶಾಲಾ-ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು.
ಮುಸ್ಲಿಮರಿಗೆ ಸಲಹೆ ನೀಡುತ್ತೇನೆ. ಕಾಂಗ್ರೆಸ್ ನಿಮ್ಮ ಮಕ್ಕಳನ್ನ ಬಳಸಿಕೊಳ್ಳುತ್ತಿದೆ. ಹಿಂದಿನಿಂದಲೂ ಇದೇ ರಾಜಕಾರಣ ಮಾಡಿದೆ. ಎಲ್ಲಾ ವರ್ಗಕ್ಕೂ ವಸ್ತ್ರ ಸಂಹಿತೆ ಇರುತ್ತದೆ. ಪೊಲೀಸ್, ಮಿಲ್ಟ್ರಿ, ವೈದ್ಯರು ಎಲ್ಲರಿಗು ಇರುತ್ತೆ. ಅದನ್ನು ಪಾಲನೆ ಮಾಡಬೇಕು. ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಇದಕ್ಕೆ ಕಾಂಗ್ರೆಸ್ ನಿಲುವೇನು? ಎಂದು ಪ್ರಶ್ನಿಸಿದರು.
ಓದಿ:ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗೆ ಕಿರುಕುಳ : ಪಿಎಫ್‌ಐ ರಾಜಾಧ್ಯಕ್ಷ ಯಾಸಿರ್ ಹಸನ್ ಆಕ್ರೋಶ..