ಕರ್ನಾಟಕ

karnataka

ETV Bharat / state

ರಾಜಕಾರಣಿಗಳಿಗೆ ನೈತಿಕತೆ ಮುಖ್ಯ: ಸಚಿವ ಪ್ರಹ್ಲಾದ ಜೋಶಿ - Prahalad joshi latest pressmeet

ಭಾರತದ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ‌ ಕುರಿತು ಪ್ರತಿಕ್ರಿಯಿಸಿದ್ರು.

Prahalad joshi reaction over ex minister cd  case
ರಾಜಕಾರಣಿಗಳಿಗೆ ನೈತಿಕತೆ ಮುಖ್ಯ

By

Published : Mar 27, 2021, 1:27 PM IST

ಹುಬ್ಬಳ್ಳಿ:ಏನೇ ಇದ್ದರೂ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ, ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ. ನಮ್ಮನ್ನು ಅನುಕರಣೆ ಮಾಡುವ ಜನ ಇರುತ್ತಾರೆ, ನಾವು ಗೌರವದಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ‌ ಕುರಿತು ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿನಲ್ಲಿದ್ದವರು ಗೌರವಯುತವಾಗಿ ಇರಬೇಕು. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದರು.

ಇನ್ನೂ ಆರೋಗ್ಯ ಸಚಿವ ಡಿ. ಸುಧಾಕರ್​ರವರ 'ಏಕಪತ್ನಿವೃತಸ್ಥ' ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಧಾಕರ್ ಹೇಳಿಕೆ ಸರಿಯಲ್ಲ. ಆ ರೀತಿ ಹೇಳಿಕೆ ಕೊಡಬಾರದಿತ್ತು. ಬೇರೆಯವರನ್ನು ನೋಡಿ ನಾವು ಅನುಸರಿಸುವುದಲ್ಲ. ನಮಗೆ ನಾವು ಸರಿಯಾಗಿ ಇರಬೇಕು ಎಂದು ಅವರು ಹೇಳಿದರು.

ಇದೆಲ್ಲಾ ಬೆಳಗಾವಿ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನರೇಂದ್ರ ಮೋದಿ, ಸುರೇಶ ಅಂಗಡಿಯವರು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಚುನಾವಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details