ಕರ್ನಾಟಕ

karnataka

ETV Bharat / state

ಮಹಿಳಾ ದಿನಾಚರಣೆ ಅಂಗವಾಗಿ ನೈಋತ್ಯ ರೈಲ್ವೆ ವಲಯದಿಂದ ಪವರ್ ವಾಕ್ ಅಭಿಯಾನ - ನೈಋತ್ಯ ರೈಲ್ವೇ ವಲಯ ಸುದ್ದಿ

ನೈಋತ್ಯ ರೈಲ್ವೆ ವಲಯದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರೈಲ್ವೆ ಮಹಿಳಾ ಸಿಬ್ಬಂದಿ ನಗರದ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಿಂದ ರೈಲು ನಿಲ್ದಾಣದವರೆಗೆ ಪವರ್ ವಾಕ್ ಅಭಿಯಾನ ನಡೆಸಿದರು.

power-walk-campaign-by-southwest-railways
ಪವರ್ ವಾಕ್ ಅಭಿಯಾನ

By

Published : Mar 4, 2020, 5:03 PM IST

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರೈಲ್ವೆ ಮಹಿಳಾ ಸಿಬ್ಬಂದಿ ನಗರದ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಿಂದ ರೈಲು ನಿಲ್ದಾಣದವರೆಗೆ ಪವರ್ ವಾಕ್ ಅಭಿಯಾನ ನಡೆಸಿದರು.

ಪವರ್ ವಾಕ್​​ಗೆ ಚಾಲನೆ ನೀಡಿ ಮಾತನಾಡಿದ ಡಿವಿಜನಲ್ ಮ್ಯಾನೇಜರ್ ಅರವಿಂದ ಮಾಲ್ಕೇಡೆ, ಮಹಿಳಾ ದಿನಾಚರಣೆ ಅಂಗವಾಗಿ ನೈಋತ್ಯ ರೈಲ್ವೆ ವತಿಯಿಂದ ಮಹಿಳಾ ಸಬಲೀಕರಣ ಪವರ್ ವಾಕ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕೂಡ ತನ್ನ ಸಾಮರ್ಥ್ಯದಿಂದ ಮಹಿಳೆಯರು ಸಬಲರಾಗುತ್ತಿರುವುದು ವಿಶೇಷವಾಗಿದೆ ಎಂದರು.

ಪವರ್ ವಾಕ್ ಅಭಿಯಾನ

ನೈಋತ್ಯ ರೈಲ್ವೆ ವಲಯದಲ್ಲಿ ಸಾವಿರಾರು ಮಹಿಳೆಯರು ಕಾರ್ಯನಿರ್ವಹಿಸುತಿದ್ದು, ನೈಋತ್ಯ ರೈಲ್ವೆ ಜನಪ್ರಿಯತೆ ಕಾಗೂ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಲು ಮಹಿಳೆಯರ ಪಾತ್ರ ಕೂಡ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಲಾಖೆಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 1ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜಾಥಾದಲ್ಲಿ ನೂರಾರು ರೈಲ್ವೆ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.

ABOUT THE AUTHOR

...view details